ಎಸಿಬಿ ದಾಳಿಯಲ್ಲಿ ಸಿಕ್ಕುಬಿದ್ದಿದ್ದ ಅಧಿಕಾರಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ !

acb-ride-man-suicides koppal-rail-stationಇತ್ತೀಚಿಗೆ ಎಸಿಬಿ ದಾಳಿಯಲ್ಲಿ ಸಿಕ್ಕುಬಿದ್ದಿದ್ದ ಅಧಿಕಾರಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಗರದ ಹೊರವಲಯದ ಹರ್ಷಾ ಹೋಟಲ್ ಬಳಿ ಘಟನೆ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಸಯ್ಯ ಅಂಗಡಿ ಎಂದು ಗುರುತಿಸಲಾಗಿದೆ. ಕಳೆದ ತಿಂಗಳ 20ರಂದು ಅಮ್ಮಾಜಾನ್ ಕೋಲ್ಕಾರ್ ಎನ್ನುವ ಮಹಿಳೆ ತನ್ನ ಪತಿ ನಾಸೀರ್ ಹುಸೇನ್ ಎನ್ನುವವರ ಅಂತ್ಯಕ್ರಿಯೆಗೆ ಸಹಾಯಧನ ಪಡೆಯಲು ಅರ್ಜಿ ಹಾಕಿದ್ದರು. ಅಮ್ಮಾಜಾನ್ ಇವರಿಂದ ಸಹಾಯಧನ ಮಂಜೂರಿಗೆ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಬಸಯ್ಯ ಅಂಗಡಿ ಅವರು, 2 ಸಾವಿರ ರೂ. ಲಂಚ ಕೇಳಿದ್ದರು. ಈ ಕುರಿತು ಫಲಾನುಭವಿ ಮಹಿಳೆ, ಸ್ಥಳೀಯ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಬಸಯ್ಯ ಅಂಗಡಿ ಅವರನ್ನು ವಶಕ್ಕೆ ಪಡೆದಿದ್ದರು. ಎಸಿಬಿ ಅಧಿಕಾರಿ ಮೌನೇಶ್ವರ್ ಮಾಲಿ ಪಾಟೀಲ್, ಕರಿಯಪ್ಪ ಬನ್ನಿ ಈ ದಾಳಿಯ ನೇತೃತ್ವವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಸಯ್ಯ ಅಂಗಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ರೈಲ್ವೆ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದ್ದು ನಾಳೆ ಪೋಸ್ಟ್ ಮಾರ್ಟಂ ನಡೆಯಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Please follow and like us:
error