You are here
Home > Koppal News-1 > ಎಲ್ಲೆಡೆ ಮಹಾವೀರ ಜಯಂತಿಯ ಸಂಭ್ರಮ..

ಎಲ್ಲೆಡೆ ಮಹಾವೀರ ಜಯಂತಿಯ ಸಂಭ್ರಮ..

ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದುದು. ಇದು ಕೊನೆಯ ತೀರ್ಥಂಕರನಾದ ಮಹಾವೀರನ ಜನ್ಮದಿನವನ್ನು ಆಚರಿಸುತ್ತದೆ. ಮಹಾವೀರ ಜನಿಸಿದ್ದು ಚೈತ್ರ 13012825_943793429067168_2544513606912308997_nಮಾಸದ ಶುಕ್ಲ ತ್ರಯೋದಶಿಯಂದು. ವರ್ಷ ಕ್ರಿ.ಪೂ. ೫೯೯ ಅಥವಾ ಕ್ರಿ.ಪೂ. ೬೧೫. ಆಂಗ್ಲ ಕ್ಯಾಲೆಂಡರ್ ನಲ್ಲಿ ಈ ಹಬ್ಬ ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ನ ಆರಂಭದಲ್ಲಿ ಉಂಟಾಗುತ್ತದೆ. ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತಲಾಗುತ್ತದೆ. ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಬರುತ್ತಾರೆ.

Leave a Reply

Top