ಎಬಿವಿಪಿ ಸಂಘಟನೆಯ ದುರ್ವರ್ತನೆ : ಕ್ರಮಕ್ಕೆ ಆಗ್ರಹ

protest-kpl (1) protest-kpl (2)
ಕೊಪ್ಪಳ : ಎಬಿವಿಪಿ ಸಂಘಟನೆಯ ದುರ್ವರ್ತನೆ ಖಂಡಿಸಿ ಮತ್ತು ಅವರ ವಿರುದ್ದ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಕೊಪ್ಪಳದ ಪ್ರಗತಿ ಪರ ಸಂಘಟನೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಿನ್ನೆ ಎಬಿವಿಪಿ ಸಂಘಟನೆಯ ಕಾರ‍್ಯಕರ್ತರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅನುಮತಿ ಇಲ್ಲದೇ ಒಳಗೆ ನುಗ್ಗಿ ಪ್ರಭಾರಿ ಪ್ರಾಂಶುಪಾಲರ ಮೇಲೆ ದುಂಡಾವರ್ತನೆ ತೋರಿದ್ದಾರೆ. ಅಲ್ಲದೇ ರಜೆಯಲ್ಲಿದ್ದರೂ ಆ ಸಂದರ್ಭದಲ್ಲಿ ಕಾಲೇಜಿಗೆ ಆಗಮಿಸಿದ್ದ ಪ್ರಾಚಾರ್ಯ ಡಾ.ವಿ.ಬಿ.ರಡ್ಡೇರ್ ಮೇಲೆ ಆವಾಚ್ಯ ಬೈಗುಳುಗಳಿಂದ ನಿಂದನೆ ಮಾಡಿದ್ದಲ್ಲದೆ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಅಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ. ಎಬಿವಿಪಿ ಸಂಘಟನೆಯ ಕಾರ್ಯಕರ್ತರ ಈ ದುರ್ವರ್ತನೆಯನ್ನು ಖಂಡಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಯವರು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಡಿಡಿಪಿಯುವರಿಗೆ ಮನವಿ ಸಲ್ಲಿಸಿ ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯರನ್ನು ಕಾಲೇಜು ಸಮವಸ್ತ್ರದ ಮೇಲೆಯೇ, ಕಾಲೇಜಿನ ಸಮಯದಲ್ಲಿ ವಿವಿಧ ಪ್ರತಿಭಟನೆಗಳಿಗೆ ಕರೆದೊಯ್ಯುತ್ತಿರುವುದರಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಕಾಲೇಜಿನವರೇ ಜವಾಬ್ದಾರಾಗುತ್ತಾರೆ ಹೀಗಾಗಿ ಪ್ರಾಂಶುಪಾಲರು ಈ ರೀತಿ ಭಾಗವಹಿಸಬಾರದು ಎಂದು ಆದೇಶ ನೀಡಿದ್ದರು. ಇದರ ಬಗ್ಗೆ ಸಮಾಧಾನಚಿತ್ತದಿಂದ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿನಿಯರ ಮುಂದೆಯೇ ಪ್ರಾಂಶುಪಾಲರ ಜೊತೆ ಕೆಟ್ಟದಾಗಿ ವರ್ತಿಸಿರುವುದು ಖಂಡನೀಯ. ಇಂತಹ ಘಟನೆಗಳು ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಅಶಾಂತಿಗೆ, ಅವನತಿಗೆ ಕಾರಣವಾಗುತ್ತೆ. ವಿಧ್ಯಾರ್ಥಿಗಳ ಸಮಸ್ಯೆಗಳ ಕುರಿತಂತೆ ಎಷ್ಟಾದರೂ ಹೋರಾಟ ಮಾಡಲಿ ಅದಕ್ಕೆ ನಮ್ಮೆಲ್ಲರ ಬೆಂಬಲ ಇರುತ್ತೆ. ಆದರೆ ನಾನಾ ರಾಜಕೀಯ ಉದ್ದೇಶಗಳಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಾ ಹೋದರೆ ಅವರ ಜೀವನವೇ ಹಾಳಾಗುತ್ತೆ. ಅಲ್ಲದೇ ಈ ಪ್ರಕರಣದ ಹಿಂದೆ ಇದೇ ಕಾಲೇಜಿನ ಉಪನ್ಯಾಸಕ ಸೋಮನಗೌಡರ ಕೈವಾಡವೂ ಇದೆ ಎನ್ನಲಾಗುತ್ತಿದೆ ಅಲ್ಲದೇ ಅವರ ಮಗ ರವಿಚಂದ್ರನೇ ಎಬಿವಿಪಿಯ ಮುಖಂಡನಾಗಿರುವುದರಿಂದ ಈ ಪ್ರಕರಣ ಇನ್ನೂ ಹೆಚ್ಚು ಗಂಬೀರವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬರಬೇಕಾಯಿತು. ಹೀಗಾಗಿ ಇಂತಹ ಅಶಾಂತಿಯನ್ನು ಹರಡುತ್ತಿರುವ ಮತ್ತು ಈಗಾಗಲೇ ಹಲವಾರು ಸಂದರ್ಭಗಳಲ್ಲಿ ದುರ್ವರ್ತನೆ ತೋರಿರುವ ಎಬಿವಿಪಿ ಸಂಘಟನೆ ಮತ್ತು ಕಾರ್ಯಕರ್ತರ ಮೇಲೆ ನಿನ್ನೆ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸೌಹಾರ್ಧತೆಯನ್ನು ಕಾಪಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಗತಿಪರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಗಾರರಾದ ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ, ಅಲ್ಲಮಪ್ರಭು ಬೆಟ್ಟದೂರ, ಹೆಚ್.ಎಸ್.ಪಾಟೀಲ್, ಬಸವರಾಜ್ ಶೀಲವಂತರ, ಎಚ್.ವಿ.ರಾಜಾಬಕ್ಷಿ, ಗಾಳೆಪ್ಪ ಮುಂಗೋಲಿ, ಕಾಶಿಂ ಸರ್ಧಾರ್ , ಮಕಬೂಲ್ ರಾಯಚೂರ , ಎ.ಜಿ.ತಿಮ್ಮಾಪೂರ

Please follow and like us:
error