ಎಬಿವಿಪಿಯನ್ನು ವಿರೋಧಿಸಿದ್ದ ಹುತಾತ್ಮ ಯೋಧನ ಪುತ್ರಿಗೆ ಅತ್ಯಾಚಾರ ಬೆದರಿಕೆ

kargil-martyrs-daughter-abvpಹೊಸದಿಲ್ಲಿ,ಫೆ.26: ಬುಧವಾರ ದಿಲ್ಲಿಯ ವಿವಿಯ ರಮಜಸ್ ಕಾಲೇಜಿನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಎಬಿವಿಪಿಗೆ ತಾನು ಹೆದರುವುದಿಲ್ಲ ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ದಿಟ್ಟತನ ಪ್ರದರ್ಶಿಸಿದ್ದ, ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ ಹಾಗೂ ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಗೆ ಈಗ ಅತ್ಯಾಚಾರ ಬೆದರಿಕೆ ಸೇರಿದಂತೆ ಸರಣಿ ಬೆದರಿಕೆಗಳು ಬರತೊಡಗಿವೆ.

ರವಿವಾರ ರಾತ್ರಿ ಎನ್‌ಡಿಟಿವಿಯ ‘ವಿ ದಿ ಪೀಪಲ್ ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಗ್, ‘‘ ಸಾಮಾಜಿಕ ಮಾಧ್ಯಮದಲ್ಲಿ ನನಗೆ ಬಹಳಷ್ಟು ಬೆದರಿಕೆಗಳು ಬರತೊಡಗಿವೆ. ನನ್ನನ್ನು ರಾಷ್ಟ್ರವಿರೋಧಿಯೆಂದು ನಿಂದಿಸುತ್ತಿದ್ದಾರೆ. ರಾಹುಲ್ ಎಂಬಾತನಂತೂ ನನ್ನ ಮೇಲೆ ಹೇಗೆ ಅತ್ಯಾಚಾರ ನಡೆಸುತ್ತೇನೆ ಎಂದು ವರ್ಣಿಸಿದ್ದಾನೆ, ಇದು ತುಂಬ ಕಳವಳಕಾರಿಯಾಗಿದೆ ’’ಎಂದು ಹೇಳಿದರು.

Leave a Reply