ಎಪಿಎಂಸಿ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜರೀನಾಬೇಗಂ ಅರಗಂಜಿ ಪರ ಪ್ರಚಾರ

koppal_km_sayyed
ಕೊಪ್ಪಳ : ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಚುನಾವಣೆಯ
ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಜರೀನಾಬೇಗಂ ಅರಗಂಜಿ ಪರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ನಗರದ ವಿವಿಧಡೆ ಪ್ರಚಾರ ಕೈಗೊಂಡರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡಿ ಜನಪ್ರೀಯತೆ ಹೊಂದಿದೆ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ರೈತರ ಪರವಾದ ಸರಕಾರವಾಗಿದೆ, ರಾಜ್ಯದ ಜನತೆಗೆ ಅನೇಕ ಜನಪರ ಯೋಜನೆಗಳನ್ನು ನೀಡಿ ಜನಪ್ರೀಯತೆ ಹೊಂದಿದ ಸರಕಾರವಾಗಿದೆ ಹೀಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎಂ.ಸಯ್ಯದ್, ಪ್ರಸನ್ನ ಗಡಾದ್, ನಗರಸಭೆ ಸದಸ್ಯ ಮಲ್ಲಪ್ಪ ಕವಲೂರು, ರಫೀಕ್ ಧಾರವಾಡ, ಜಾಕೀರ್‌ಹುಸೇನ್ ಕಿಲ್ಲೇದಾರ, ಅಮ್ಜದ್ ಪಟೇಲ್,ಎಂ.ಕಾಟನ್‌ಪಾಷ,ಮಾನ್ವಿ ಪಾಷ, ಚೀಕನ್ ಫೀರ, ಓಜನಹಳ್ಳಿ ಗ್ರಾ.ಪಂ ಅಧ್ಯಕ್ಷ ಯಮನೂರಪ್ಪ ನಾಯಕ್,ರಾಮಣ್ಣ ಹದ್ದೀನ್, ಶಿವಾನಂದ ಹೊದ್ಲೂರು,ಖತೀಬ್ ಬಾಷು,ವೀರಣ್ಣ ಸಂಡೂರು, ಗವಿಸಿದ್ದಪ್ಪ ಮುದಗಲ್, ಗುರುರಾಜ್ ಹಲಗೇರಿ,ಮಹೆಬೂಬ್ ಅರಗಂಜಿ, ಜಾಫರ್ ತಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply