ಎಡೆಯೂರು ಸಂಸ್ಕೃತ ಪಾಠಶಾಲೆಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿರುವ ಸಂಸ್ಕೃತ ಪಾಠಶಾಲೆಗೆ ಪ್ರಸಕ್ತ sanskrit-pathshalaಸಾಲಿಗೆ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಸಿದ್ಧಲಿಂಗೇಶ್ವರ ಸಂಸ್ಕೃತ, ವೇದ, ಜ್ಯೋತಿಷ್ಯ, ಮತ್ತು ವೀರಶೈವಾಗಮ ಪಾಠಶಾಲೆ ನಡೆಸಲಾಗುತ್ತಿದ್ದು ವಿವಿಧ ವಿಷಯಗಳ ಪ್ರವೇಶಾತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.
ಭೋಧಿಸುವ ವಿಷಯಗಳ ವಿವರ ಇಂತಿದೆ: ಸಂಸ್ಕೃತ ಪ್ರಥಮ, ದ್ವಿತೀಯ ಹಾಗೂ ತೃತೀಯ ತರಗತಿಗಳು, ಸಂಸ್ಕೃತ ಕಾವ್ಯ ೧ ಮತ್ತು ೨ ನೇ ತರಗತಿಗಳು, ವೀರಶೈವ ವೇದ, ಪ್ರಥಮ, ಪ್ರವೇಶ ಮೂಲ ತರಗತಿಗಳು, ವೀರಶೈವಾಗಮ ಪ್ರವರ ಮತ್ತು ಪ್ರವೀಣ ತರಗತಿಗಳು, ಜ್ಯೋತಿಷ್ಯ ತರಗತಿಗಳಿಗೆ ಅರ್ಜಿ ಸಲ್ಲಿಸಬಹುದು.
ವಿಧ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶ, ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಮುಖ್ಯೋಪಾಧ್ಯಾಯರು, ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಸಂಸ್ಕೃತ, ವೇದ, ಜ್ಯೋತಿಷ್ಯ ಮತ್ತು ವೀರಶೈವಾಗಮ ಪಾಠಶಾಲೆ, ಎಡೆಯೂರು-೫೭೨೧೪೨, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ ಇಲ್ಲಿಗೆ ಅಥವಾ ಮೊ.ಸಂ:೯೪೪೮೫೧೨೧೫೯ ಗೆ ಸಂಪರ್ಕಿಸಬಹು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ  ತಿಳಿಸಿದ್ದಾರೆ.

Please follow and like us:
error