ಎಚ್.ಕೆ. ನಿರಂಜನ್ ಇವರಿಗೆ ಸನ್ಮಾನ

ಕೊಪ್ಪಳದ ಪ್ರದಾನ ಅಂಚೆ ಕಛೇರಿಯ ಪೋಸ್ಟ ಮಾಸ್ಟರ್ ಆಗಿದ್ದ ಎಚ್.ಕೆ ನಿರಂಜನ್ ಇವರು ೩೭ ವರ್ಷಗಳ ಅಂಚೆ ಇಲಾಕೆಯ ಸುಧೀರ್ಘ ಸೇವೆಯ ನಂತರ ದಿ. ೩೦-೦೬-೨೦೧೬ ರಂದು ನಿವೃತ್ತಿ ಹೊಂದಿದರು, ಈ ನಿಮತ್ತ್ಯ ಕೊಪ್ಪಳದ ಅಂಚೆ ಇಲಾಕೆ ಮನೋರಂಜನಾಕೂಟ ಕೊಪ್ಪಳ ಇವರು ಬೀಳ್ಕೊಡುಗೆ ಹಾಗು ಸನ್ಮನ ಸಮಾರಂಭ ಎರ್ಪಡಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಬಸವರಾಜ ಕಟ್ಟಿ, ಅಂಚೆ ಪಾಲಕರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಮ್.ವಿ ಪಾಟೀಲ್, ಅಂಚೆ ಅಧೀಕ್ಷಕರು ಗದಗ ವಿಭಾಗ ಹಾಗು ಶ್ರೀ ರಾಘವೇಂದ್ರ ಬಿ ಪಾನಘಂಟಿ, ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ಮತ್ತು ಅಂಚೆ ಸಲಹಾ ಸಮಿತಿಯ ಸದಸ್ಯರು ವಹಿಸಿದ್ದರು. ಅತಿಥಿಗಳಾಗಿ  ವೆಂಕಟೇಶ ಬದಾಮಿ, ಅಂಚೆ ನಿರೀಕ್ಷಕರು ಕೊಪ್ಪಳ ಇವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅಂಚೆ ಇಲಾಕೆಯ ನೂರಾರು ನೌಕರ ವರ್ಗದವರು ಹಾಗು ಹಿತೈಶಿಗಳು ಶ್ರೀ ಎಚ್.ಕೆ ನಿರಂಜನ್‌ರವರ ಸೇವೆಯ ಬಗ್ಗೆ ಗುಣಗಾನಮಾಡಿ ಸನ್ಮಾನಿಸಿದರು.

ಎಚ್.ಕೆ. ನಿರಂಜನ್ ಇವರಿಗೆ ವಿದ್ಯಾವಿಕಾಸ ಶಿಕ್ಷಣ ಸಂಸ್ತೆಯ ಆಡಳಿತ ಮಂಡಳಿಯವರಿಂದ ಸನ್ಮಾನ

niranjan-koppal

ದಿ. ೩೦-೦೬-೨೦೧೬ ರಂದು ಅಂಚೆ ಇಲಾಕೆಯ ಸುಧೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ಎಚ್.ಕೆ ನಿರಂಜನ್ ಇವರಿಗೆ ಕೊಪ್ಪಳದ ಅಂಚೆ ಇಲಾಖೆ ಮನೋರಂಜನಾಕೂಟ, ಕೊಪ್ಪಳ ಇವರು ಎರ್ಪಡಿಸಿದ್ದ ಬೀಳ್ಕೊಡುಗೆ ಹಾಗು ಸನ್ಮನ ಸಮಾರಂಭದಲ್ಲಿ ಭಾಗ್ಯನಗರದ ವಿದ್ಯಾವಿಕಾಸ ಶಿಕ್ಷಣ ಸಂಸ್ತೆಯ ಆಡಳಿತ ಮಂಡಳಿಯವರು ಸನ್ಮಾನಿಸಿದರು.

niranjan-panaganti-koppal

Please follow and like us:
error