ಉರಿ ದಾಳಿ ಪ್ರಕರಣದ ತನಿಖೆ ಎನ್‌ಐಎಗೆ

KESAVAN_URI_attack

ಹೊಸದಿಲ್ಲಿ, ಸೆ.20: ಜೈಶ್-ಎ-ಮುಹಮ್ಮದ್ ಸಂಘಟನೆಯ ಉಗ್ರರು ಉರಿ ಸೇನಾ ಕೇಂದ್ರದ ಮೇಲೆ ನಡೆಸಿದ ದಾಳಿಯ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಲಿದೆ. ಐಎನ್‌ಐ ಮೃತ ಉಗ್ರರ ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಉರಿ ಮತ್ತು ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯಲ್ಲಿನ ಸಾಮ್ಯತೆಗಳನ್ನು ಪರಿಶೀಲಿಸಲಿದೆ.

  ಪಠಾಣ್‌ಕೋಟ್ ವಾಯುನೆಲೆ ದಾಳಿಯ ಕುರಿತಂತೆ ಸಾಕ್ಷಾಧಾರ ಕಳಿಸುವಂತೆ ಕೋರಿ ಎನ್‌ಐಎ ಪಾಕಿಸ್ತಾನಿ ಅಧಿಕಾರಿಗಳಿಗೆ ಕಳಿಸಿದ ಪತ್ರಕ್ಕೆ ಇದುವರೆಗೂ ಉತ್ತರ ಬಂದಿಲ್ಲ. ಇದುವರೆಗೆ ಸುಮಾರು 9 ಪತ್ರಗಳಿಗೆ ಪಾಕಿಸ್ತಾದ ಉತ್ತರ ಬಾಕಿಯಿದೆ ಎಂದು ಹಿರಿಯ ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

  ಕಳೆದ ಎರಡು-ಮೂರು ವರ್ಷಗಳಲ್ಲಿ ಈ ರೀತಿ ಸಾಕ್ಷಾಧಾರ ಕೋರಿ ಪಾಕಿಸ್ತಾನಕ್ಕೆ ಸುಮಾರು 9 ಪತ್ರ ಕಳಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಪಾಕಿಸ್ತಾನದ ಸ್ಥಳೀಯರು ನೆರವು ನೀಡಿರುವುದು ಸ್ಪಷ್ಟವಾಗಿದೆ. ಹನಿಹನಿಗಳನ್ನು ಜೋಡಿಸುವ ಕಾರ್ಯ ಆಗಬೇಕಿದೆ. ಆದರೆ ಪಾಕಿಸ್ತಾನ ಯಾವುದೇ ಮಾಹಿತಿ ನೀಡಲು ತಯಾರಿಲ್ಲ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಮಾರ್ಚ್‌ನಲ್ಲಿ ನಡೆದ ಪಠಾಣ್‌ಕೋಟ್ ದಾಳಿ ಪ್ರಕರಣದ ಬಗ್ಗೆ ಜಂಟಿ ತನಿಖೆ ನಡೆಸಲು ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಆಹ್ವಾನಿಸಿತ್ತು.

Leave a Reply