You are here
Home > Koppal News-1 > ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ

koppal_new_informationಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಇರಕಲ್‌ಗಡಾ ಗ್ರಾಮ ಪಂಚಾಯತ್ ವತಿಯಿಂದ ೧೩೦ ಕೂಲಿಕಾರರಿಗೆ ಇರಕಲ್‌ಗಡಾ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಡಿ ಉದ್ಯೋಗ ನೀಡಲಾಗಿದೆ ಎಂದು ಇರಕಲ್‌ಗಡ ಪಿಡಿಓ ಲಲಿತಾ ಸುರಾಳ ತಿಳಿಸಿದ್ದಾರೆ.
ಪ್ರತಿ ದಿನ ೬೭ ಜನ ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಅಂದಾಜು ೧೦ ಲಕ್ಷ ರೂ. ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ೧೩೦ ಜನ ಕೂಲಿಕಾರರ ಎನ್‌ಎಂಆರ್ ಸೃಜಿಸಲಾಗಿದೆ. ಒಂದು ತಂಡಕ್ಕೆ ೨೦ ಜನ ಕೂಲಿಕಾರರಂತೆ ಒಟ್ಟು ೬ ತಂಡಗಳನ್ನು ರಚಿಸಲಾಗಿದೆ. ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಮಗಾರಿಯನ್ನು ಗ್ರಾಮ ಪಂಚಾಯತ್ ವತಿಯಿಂದಲೇ ನಿರ್ವಹಿಸಲಾಗುತ್ತಿದ್ದು, ಕೂಲಿಕಾರರ ಕೂಲಿ ಹಾಜರಾತಿಯನ್ನು ಪಡೆಯಲು ೪ ಕಾಯಕ ಬಂಧುಗಳಳನ್ನು ನಿಯೋಜಿಸಿ ಅವರ ಮುಖಾಂತರವೇ ಹಾಜರಾತಿ ಪಡೆದು ಕಾಮಗಾರಿ ನಿರ್ವಹಿಸಲಾಗಿತ್ತಿದೆ.
ಗ್ರಾ.ಪಂ ವ್ಯಾಪ್ತಿಯಲ್ಲಿ ೧೫೯೬ ಜಾಬ್‌ಕಾರ್ಡ್ ಹೊಂದಿದ ಕುಟುಂಬಗಳಿದ್ದು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ, ಇರಕಲ್‌ಗಡಾ ಗ್ರಾ.ಪಂನಲ್ಲಿ ಕೊಡದಾಳ ಕೆರೆ, ಯಲಮಗೇರಾ ಗ್ರಾಮದ ಕೆರೆ ಹೂಳೆತ್ತುವುದು, ಜಮೀನಿನಲ್ಲಿ ವೈಯಕ್ತಿಕ ಸಸಿಗಳ ನೆಡುವಿಕೆ ಇತ್ಯಾದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಈವರೆಗೆ ೧೭.೭೦ ಲಕ್ಷ ರೂ. ವೆಚ್ಚವಾಗಿದ್ದು ೧೬೭೭೦ ಮಾನವ ದಿನಗಳನ್ನು ಸೃಜಿಸಲಾಗಿದೆ. ೪೨ ಕುಟುಂಬಗಳಿಗೆ ೧೦೦ ಮಾನವ ದಿನಗಳ ಕೂಲಿ ಕೆಲಸ ನೀಡಲಾಗಿದೆ. ಪ.ಜಾತಿ-೫೭, ಪ.ಪಂಗಡ-೩೨, ಇತರೆ-೨೨೪ ಒಟ್ಟು-೩೧೩ ಕುಟುಂಬಗಳಿಗೆ ಸಕಾಲದಲ್ಲಿ ಉದ್ಯೋಗ ಒದಗಿಸಿ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣ ಪಾವತಿಸಲಾಗಿದೆ ಎಂದು ಇರಕಲ್‌ಗಡಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲಲಿತಾ ಸುರಾಳ ತಿಳಿಸಿದ್ದಾರೆ.

Leave a Reply

Top