ಉದ್ಯೋಗಖಾತ್ರಿಯಡಿ ಬಿಸರಳ್ಳಿ ಕೂಲಿಕಾರ್ಮಿಕರಿಂದ ಕೆರೆ ಅಭಿವೃದ್ಧಿ ಕಾಮಗಾರಿ.

ಕೊಪ್ಪಳ ಏ. ೨೮ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಬಿಸರUntitled-4 copyಳ್ಳಿ ಗ್ರಾಮದ ಕೂಲಿಕಾರರು ನಿರ್ವಹಿಸಿದರು. ಕೆರೆ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ ರೂ.೪೦.೦೦ ಲಕ್ಷ ಇದ್ದು ೨೬೦ ಕೂಲಿಕಾರರು ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್, ಕೊಪ್ಪಳದ ಜಿಲ್ಲಾ ಐ.ಇ.ಸಿ. ಸಂಯೋಜಕ ಶ್ರೀನಿವಾಸ ರವರು ರೋಜಗಾರ್ ದಿವಸವನ್ನು ಆಚರಿಸಿ ಕೂಲಿಕಾರರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಕುರಿತಾಗಿ ವಿವರಿಸಿದರು. ತಾಲೂಕ ಪಂಚಾಯತ್ ಕಾರ್ಯಾಲಯ ಕೊಪ್ಪಳದ ಸಹಾಯಕ ಕಾರ್ಯದರ್ಶಿಗಳು, ತಾಲೂಕ ಸಾಮಾಜಿಕ ಪರಿಶೋಧನಾ ಸಂಯೋಜಕರು, ತಾಲೂಕ ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು, ಸಂಬಂಧಿಸಿದ ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.

Leave a Reply