ಉತ್ತರ ಕರ್ನಾಟಕ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡ ಬೇಕಾಗುತ್ತದೆ

karave-yuvasainyaಸರಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡ ಬೇಕಾಗುತ್ತದೆ
ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಎಚ್ಚರಿಕೆ
ಕುಕನೂರ :
ಸರಕಾರ ಉತ್ತರ ಕರ್ನಾಟಕದ ರೈತರ ಮತ್ತು ಜನರ ತಾಳಮ್ಮೆಯನ್ನು ಪರೀಕ್ಷೆ ಮಾಡುತಿದೆ ವರ್ಷಾನುಗಟ್ಟಲೆ ರೈತರು ನಿರಂತರ ಕಳಸಾ ಬಂಡೂರಿ ಜಾರಿಗಾಗಿ ಹೋರಾಟ ಮಾಡುತಿದ್ದರು ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಗಮನಹರಿಸುತ್ತಿಲ್ಲ ಅಷ್ಷೇ ಅಲ್ಲದೆ ಉತ್ತರ ಕರ್ನಾಟಕದ ಸಮಸ್ಯೆಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸ್ಪಂಧಿಸುತ್ತಿಲ್ಲ ಹಿಗೆ ಮುಂದು ವರೆದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅವರು ಸಮೀಪದ ಕರವೇ ಯುವಸೈನ್ಯ ಕವಳಕೇರಿ ಗ್ರಾಮ ಘಟಕ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯಲ್ಲಿ ಕೃಷ್ಣಾ ಬಿ ಸ್ಕೀಂ ನೀರಾವರಿ ಹುಲಿಗುಡ್ಡ ಎತನೀರಾವರಿ ಮತ್ತು ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ ಅವಗಳ ಬಗ್ಗೆ ಗಮನಹರಿಸಬೇಕು ಎಂದರು.
ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಯಲಬುರ್ಗಾದ ಶ್ರೀಧರ ಮುರಡಿiಠದ ಶ್ರೀ ಬಸವಲಿಗೇಂಶ್ವರ ಶಿವಚಾರ್ಯ ಸ್ವಾಮಿಜಿ ಮಾತನಾಡಿ ಕನ್ನಡ ಪರ ಸಂಘಟನೆಗಳು ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ ಆದರೆ ಸಂಘಟನೆಗಳು ತಮ್ಮ ಸ್ವಾರ್ಥ ಕ್ಕಾಗಿ ಯಾವುದೇ ಜಾತಿಯ ಮತ್ತು ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ ಸಮಾಜ ಮುಖಿಯಾಗಿ ಬೆಳಯಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕುಕನೂರ ಪಿಎಸ್‌ಐ ವಿಶ್ವನಾಥ ಹಿರೇಗೌಡರ ಮಾತನಾಡಿ ತಾಲೂಕಿನಲ್ಲಿ ಕರವೇಯುವಸೈನ್ಯ ಜನರ ಮೆಚ್ಚುವಂತ ಕೆಲಸವನ್ನು ಮಾಡುತ್ತಿದೆ ಅದಕ್ಕೆ ಪೂರಕವಂತೆ ರ‍್ಯಾವಣಕಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿತವನ್ನು ಬಿಡಲು ಜಾಗೃತಿ ಮತ್ತು ಅಕ್ರಮ ಮದ್ಯ ಮಾರಟವನ್ನು ಗ್ರಾಮದಲ್ಲಿ ನಿಷೇಧಿಸಿದ್ದಾರೆ ಹಿಗೆ ನಿಮ್ಮ ಕಾರ್ಯಗಳು ಮುಂದೆ ವರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ತಾಲೂಕ ಅಧ್ಯಕ್ಷ ನಾಗರಾಜ ಹಾಲಳ್ಳಿ,ಮಾತನಾಡಿ ಸಂಘಟನೆಗಳು ನಿರಂತರವಾಗಿ ನಾಡಿನ ಭಾಷೆ,ನೆಲ,ಜಲ ಸಂಭಂಧಿಸಿದ ಬಗ್ಗೆ ಮತ್ತು ಸ್ಥಳಿಯ ಸಮಸ್ಯೆಗಳಿಗೆ ಹೋರಾಟದ ಮುಖಾಂತರ ನ್ಯಾಯ ಒದಗಿಸಿಕೊಡುತ್ತಿವೆ ಆದರೆ ಜನಪ್ರತಿನಿಧಿಗಳು ಆದವರಿಗು ಜನರ ಬಗ್ಗೆ ಕಾಳಜಿ ಇರಬೇಕು ಅಂದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಭುಗೌಡ ಪೋಲಿಸಪಾಟೀಲ ವಹಿಸಿಕೊಂಡಿದ್ದರು.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಈರಪ್ಪ ಕುಡಗುಂಟಿ ಮತ್ತು ಶಿವಶಂಕರ ದೇಸಾಯಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಗಣನೀಯ ಸೇವೆಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕ ಅದ್ಯಕ್ಷ ಬ್ರಹ್ಮಾನಂದ ಬಡಿಗೇರ ಬಿಜೆಪಿ ಮುಖಂಡ ಮಂಜುನಾಥ ಗುತ್ತೆಪ್ಪನವರ,ಭರತಕುಮಾರ,ತಾಲೂಕ ಸಂಚಾಲಕ ಕೃಷ್ಣ ಅಬ್ಬಿಗೇರಿ,ಪುಟ್ಟರಾಜ,ವಿರೇಶ ಹೊಸಮನಿ,ಮುದಿಯಪ್ಪ ಚಿಗರಿ,ಶಿವಕುಮಾರ ಮದ್ಲಾಪೂರ,ಶರಣಪ್ಪ ಒಲೆಕಾರ,ಮೈಲಾರಪ್ಪ,ನಿಂಗಪ್ಪ ಸೇರಿದಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಸ್ವಾಮಿಜಿಗಳಿಗೆ ಆರತಿ ಬೆಳಗುವದರ ಮುಖಾಂತರ ಸ್ವಾಗತಿಸಲಾಯಿತು ಪ್ರಾರ್ಥನೆಯನ್ನು ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರು ಹಾಡಿದರು.

Please follow and like us:
error