ಉಚಿತ ಸ್ವರ್ಣಾಮೃತ ಸಾಮಾಜಿಕ ಕಳಕಳಿಯ ಕೆಲಸ-ಸೈಯ್ಯದ್.

ಕೊಪ್ಪಳ, ಏ. ೧೫. ಮಕ್ಕಳ ಆರೋಗ್ಯದ ರಕ್ಷಣೆಗೆ ಉಚಿತವಾಗಿ ಆಯುರ್ವೇದದ ಸ್ವರ್ಣಾಮೃತ ಪ್ರಾಶನ ಮಾಡುತ್ತಿರುವ ಕಾರ್ಯ ಸಾಮಾಜಿಕ ಕಳಕಳಿಯದ್ದು ಎಂದು ಯುವ ಮುಖಂಡ ಕೆ. ಎಂ. ಸೈಯ್ಯದ್ ಹೇಳಿದರು. swarnamruta prashanಅವರು ನಗರದ ಯುವ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಕುಟುಂಬದಿಂದ ಭಿಕ್ಷಾ ಕೇಂದ್ರ ೧೩ ನೇ ವಾರ್ಷಿಕೋತ್ಸವ ಹಾಗೂ ರಾಮನವಮಿ ನಿಮಿತ್ಯ ಪುಷ್ಯ ದಿನದಂದು ಹಮ್ಮಿಕೊಂಡಿದ್ದ ಉಚಿತ ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮದಲ್ಲಿ ಸ್ವರ್ಣಬಿಂದು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿರುವ ಗೊಂಡಬಾಳ ಅವರು ಒಳ್ಳೆಯ ಸ್ಥಾನಕ್ಕೆ ಬರಬೇಕು, ಸೇವಾ ಮನೋಭಾವದ ಜನ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಕುಟುಂಬವೇ ಉತ್ತಮ ಕೆಲಸ ಮಾಡುತ್ತಿರುವ ಶ್ರೇಷ್ಟ ಕೆಲಸ ಎಂದರು.

Please follow and like us:
error