ಉಚಿತ ಕೃತಕ ಹಲ್ಲುಸೆಟ್ಟು ಜೋಡಣಾ ಶಿಬಿರ

artificial_teeth_set_free
ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಆಯುರ್ವೆಧ ಮಹಾವಿದ್ಯಾಲಯ, ಆಸ್ಪತ್ರೆ, ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆಯ ಬಿ.ವಿ.ವಿ. ಸಂಘ , ಪಿ.ಎಮ್.ಎನ್.ಎಮ್ ದಂತ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ದಿನಾಂಕ ೨೩-೧೨-೨೦೧೬ರ ಶುಕ್ರವಾರದಂದು ಬೆಳಗ್ಗೆ ೯ ಗಂಟೆಯಿಂದ ಮಧ್ಯಾನ್ಹ ೨ ಗಂಟೆಯವರೆಗೆ ಉಚಿತ ಕೃತಕ ಹಲ್ಲುಸೆಟ್ಟು ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಬಾಯಿಯಲ್ಲಿ ಸಂಪೂರ್ಣವಾಗಿ ಹಲ್ಲುಗಳು ಇರದೇ ಇರುವವರಿಗೆ ಉಚಿತವಾಗಿ ಕೃತಕಹಲ್ಲು ಸೆಟ್ಟುಗಳನ್ನು ವಿತರಿಸಲಾಗುವುದು ಕಾರಣ ಕೊಪ್ಪಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರು ಈ ಶಿಬಿರದ ಸದುಪಯೋಗ ಪಡೆಯಲು ಸೂಚಿಸಲಾಗಿದೆ. ಮಾಹಿತಿಗಾಗಿ ಡಾ. ಸುರೇಶ್ ಹಕ್ಕಂಡಿ – ೯೪೪೮೬೦೯೩೬೨ ಡಾ. ಸಿ. ಎಸ್. ಕರಮುಡಿ – ೯೦೬೦೫೦೮೯೨೭, ಡಾ. ಮಂಜುನಾಥ ಅಕ್ಕಿ – ೮೧೨೩೦೪೪೧೨೫ ಡಾ. ಮಹಾಂತೇಶ ಸಾಲಿಮಠ – ೯೮೪೫೦೧೦೯೫೦ ಇವರುಗಳನ್ನು ಸಂಪರ್ಕಿಸಬಹುದೆಂದು ಪ್ರಾಚಾರ್ಯ ಡಾ.ಬಸವರಾಜ ಸವಡಿ ತಿಳಿಸಿದ್ದಾರೆ.

Please follow and like us:
error