ಇರಕಲ್‌ಗಡಾಕ್ಕೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿದ ಸಿಇಓ : ಶೌಚಾಲಯ ನಿರ್ಮಿಸಲು ಮನವೊಲಿಕೆ

adc-koppal adc-koppal-dc ತಾಲೂಕಿನ ಇರಕಲ್ಲಗಡಾ ಗ್ರಾಮಕ್ಕೆ ಬುಧವಾರದಂದು ಬೆಳ್ಳಂಬೆಳಿಗ್ಗೆ ಇತರೆ ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಕೆಗೆ ಮುಂದಾದರು.
ಕೊಪ್ಪಳ ತಾಲೂಕಿನ ಇರಕಲ್‌ಗಡಾ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಬಯಲು ಬಹಿರ್ದೆಸೆಗೆ ಹೋಗುವುದರಿಂದ ಅನೇಕ ಮಾರಕ ರೋಗಗಳು ಹರಡುತ್ತವೆ. ಆದ್ದರಿಂದ ಪ್ರತಿಯೊಂದು ಕುಟುಂಬದವರು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಹಾಗೂ ಅದನ್ನು ಬಳಸಬೇಕೆಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪ.ಜಾತಿ ಹಾಗೂ ಪ.ಪಂಗಡದ ಕುಟುಂಬಗಳಿಗೆ ರೂ.೧೫,೦೦೦ ಹಾಗೂ ಇತರೆ ಕುಟುಂಬಗಳಿಗೆ ರೂ.೧೨,೦೦೦ ಗಳ ಸಹಾಯಧನ ಒದಗಿಸಲಾಗುವುದು. ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರಣೆ ನೀಡಿದ ಪ್ರೇರಣಾಧಿಕಾರಿಗೆ ಪ್ರತಿ ವೈಯಕ್ತಿಕ ಶೌಚಾಲಯಕ್ಕೆ ರೂ.೧೫೦ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಮನೆ ಮನೆಗೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯ ಹೊಂದದೆ ಇರುವ ಕುಟುಂಬಗಳ ಮಾಹಿತಿಯನ್ನು ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು. ಪ್ರತಿ ಕಾಲೋನಿಯ ಜನ ವೈಯಕ್ತಿಕ ಶೌಚಾಲಯ ಹೊಂದಬೇಕು. ಬಯಲು ಬಹಿರ್ದೆಸೆ ಹೋಗುವುದು ಅನಿಷ್ಠ ಪದ್ದತಿಯಾಗಿದ್ದು ಇದನ್ನು ತೊಲಗಿಸಲು ಸಾರ್ವಜನಿಕರ, ಜನಪ್ರತಿನಿಧಿಗಳ, ಅಧಿಕಾರಿಗಳ ಸಹಕಾರ ಅವಶ್ಯವಿದೆ. ಇರಕಲ್‌ಗಡಾ ಗ್ರಾಮ ಹೋಬಳಿ ಕೇಂದ್ರವಾಗಿದ್ದು ವೈಯಕ್ತಿಕ ಶೌಚಾಲಯ ಹೊಂದುವುದು ಅತಿ ಅವಶ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವಂತೆ ಸರ್ಕಾರ ಗುರಿ ನಿಗದಿಪಡಿಸಿದೆ. ಇರಕಲ್‌ಗಡಾ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಇರಕಲ್‌ಗಡಾ ಸೇರಿದಂತೆ ೬ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ೧೩೬೫ ಕುಟುಂಬಗಳಿದ್ದು ಈಗಾಗಲೇ ೬೦೨ ಕುಟುಂಬಗಳು ಶೌಚಾಲಯ ಹೋಂದಿವೆ. ಇನ್ನುಳಿದ ೭೬೩ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಬೇಕಿದ್ದು ಇದೇ ವರ್ಷದಲ್ಲಿ ಎಲ್ಲಾ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ತರುವಾಯ ಗ್ರಾ.ಪಂ ಆವರಣದಲ್ಲಿ ಸೇರಿದ್ದ ಶಾಲಾ ಮಕ್ಕಳ ಬಳಿಗೆ ತೆರಳಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನಿಮ್ಮ ಪಾಲಕರ ಮನವೋಲಿಸಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸುವಂತೆ ತಿಳಿಸಬೇಕು. ಜೊತೆಗೆ ಶಾಲಾ ಆವರಣವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಣ್ಣ ಚೌಡ್ಕಿ, ಜಿ.ಪಂ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ತಾ.ಪಂ ಸದಸ್ಯೆ ರೇಣುಕವ್ವ ಶರಣಪ್ಪ ಹುಲಿಹೈದರ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು, ಗ್ರಾ.ಪಂ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಶಾಲಾ ಮುಖ್ಯೋಪಾದ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಎಸ್‌ಬಿಎಂ ಸಮಾಲೋಚಕರು, ಎಂಜಿಎನ್‌ಆರ್‌ಇಜಿಎ ತಾಲೂಕ ಐಇಸಿ ಸಂಯೋಜಕರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಗ್ರಾಪಂ ದ್ವಿತೀಯ ದರ್ಜೆ ಸಹಾಯಕಿ ರೇಣುಕಾ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error