You are here
Home > Koppal News-1 > ಇಂದು ಯಾಜ್ಞವಲ್ಕ್ಯ ಗುರುಗಳ ಜಯಂತಿ

ಇಂದು ಯಾಜ್ಞವಲ್ಕ್ಯ ಗುರುಗಳ ಜಯಂತಿ

ನಗರದ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಇಂದು ೧೪ ರಂದು ಮಂಗಳವಾರ ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತೋತ್ಸವ ಜರುಗಲಿದೆ.
ಜಂಯyagnavalkyaತಿ ಅಂಗವಾಗಿ ಕಳೆದ ೮ ದಿನಗಳಿಂದ ನಿತ್ಯ ಸಂಜೆ ೬:೩೦ಕ್ಕೆ ಬೃಹದಾರಣ್ಯಕ ಉಪನಿಷತ್ ಪ್ರವಚನ ಪಂ.ರಘು ಪ್ರೇಮಾಚಾರ್ಯ ಮುಳಗುಂದ ಇವರಿಂದ ಜರಗುತ್ತಿದೆ.
ಇಂದು ೧೪ ರಂದು ಮಂಗಳವಾರ ಜಯಂತಿ ನಿಮಿತ್ಯ ಬೆಳಿಗ್ಗೆ ಸುಪ್ರಭಾತ ತೊಟ್ಟಿಲು ಸೇವೆ ಶ್ರೀವಿಠ್ಠಲ ಕೃಷ್ಣ ದೇವರಿಗೆ ಅಭಿಶೇಕ ಶ್ರೀಸತ್ಯನಾರಾಯಣ ಪೂಜೆ, ಶ್ರೀ ಮೈತ್ರೇಯಿ ಭಜನಾ ಮಂಡಳಿಯಿಂದ ಶ್ರೀ ಯಾಜ್ಞವಲ್ಕ್ಯಗುರುಗಳ ನಾಮಸ್ಮರಣೆ ಜರುಗಲಿದ್ದು ನಂತರ ತೀರ್ಥ-ಪ್ರಸಾದ ಜರುಗಲಿದೆ. ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಗಿರದಾರ ಕೋರಿದ್ದಾರೆ.

Leave a Reply

Top