ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ರೇಣುಕಾ (೨೪) ಗಂಡ ಹನುಮಂತ ರಾಣೆ ಎಂಬ ಮಹಿಳೆ ತನ್ನ ಒಂದೂವರೆ ವರ್ಷದ ಹುಲಿಗೆಮ್ಮ ಎಂಬ ಹೆಣ್ಣು ಮಗುವಿನೊಂದಿಗೆ ಕಾಣೆಯಾಗಿದ್ದು ತಾಯಿ ಮಗುವಿನ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ರೇಣುಕಾ (೨೪) ಗಂಡ ಹನುಮಂತ ರಾಣಿ ಎಂಬ ಮಹಿಳೆ ಸೆ.೧೦ ರಂದು ತನ್ನ ಮಗು ಹುಲಿಗೆಮ್ಮಳಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ತವರು ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗ ಅಲ್ಲಿಯೂ ಕಂಡುಬಂದಿರುವುದಿಲ್ಲ ಆದ್ದರಿಂದ ಹುಡುಕಿಕೊಡುವಂತೆ ಕಾಣೆಯಾದ ಮಹಿಳೆಯ ಗಂಡ ಹನುಮಂತ ತಂ ಹನುಮಂತ ರಾಣಿ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ: ಹೆಸರು ರೇಣುಕಾ ಗಂ ಹನುಮಂತ ರಾಣಿ (೨೪), ಸಾ.ವಣಿಗೇರಿ, ಎತ್ತರ ೫.೧ ಅಡಿ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕಾಣೆಯಾದಾಗ ಕಪ್ಪು ಬಿಳಿ ಹೂವಿನ ಸೀರೆ ಹುಟ್ಟಿದ್ದು ಕೊರಳಲ್ಲಿ ಕರಿಮಣಿಯ ತಾಳಿ, ಮೂಗಿನಲ್ಲಿ ರಿಂಗ್ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಮಗುವಿನ ಚಹರೆ ವಿವರ ಇಂತಿದೆ: ಹುಲಿಗೆಮ್ಮ ತಂ ಹನುಮಂತ ರಾಣಿ, ಒಂದುವರೆ ವರ್ಷ ವಯಸ್ಸು, ಎತ್ತರ ೨ ಅಡಿ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕಾಣೆಯಾದಾಗ ಕೆಂಪು ಬಣ್ಣದ ಅಂಗಿ ತೊಟ್ಟದ್ದಳು.
ಈ ಚಹರೆಯುಳ್ಳ ತಾಯಿ ಮಗುವಿನ ಬಗ್ಗೆ ಯಾರಿಗಾದರು ತಿಳಿದುಬಂದರೆ ಕೊಪ್ಪಳ ಎಸ್ಪಿ- ೦೮೫೩೯-೨೩೦೧೧೧, ಕುಷ್ಟಗಿ ಪೊಲೀಸ್ ಠಾಣೆ-೦೮೫೩೬-೨೬೭೦೩೩, ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ-೦೮೫೩೯-೨೩೦೨೨೨ ಇಲ್ಲಿಗೆ ಕರೆ ಮಾಡಿ ತಿಳಿಸಬಹುದು
ಆಸ್ಪತ್ರೆಗೆ ತೋರಿಸಿಕೊಂಡು ಬರುವುದಾಗಿ ಹೋದ ತಾಯಿ ಮಗು ಕಾಣೆ
