You are here
Home > Koppal News-1 > ಆಷಾಡ ಶುದ್ಧ ಎಕಾದಶಿ :ಮುದ್ರಾ ಧಾರಣೆ

ಆಷಾಡ ಶುದ್ಧ ಎಕಾದಶಿ :ಮುದ್ರಾ ಧಾರಣೆ

ಕೊಪ್ಪಳ, ೦೮- ನಗರದ ಶ್ರೀವಿಠ್ಠಲಕೃಷ್ಣ ಮಂದಿರದಲ್ಲಿ ಆಷಾಡ ಶುದ್ಧ ಎಕಾದಶಿ ಎಂದು ಜುಲೈ ೧೫ ರಂದು ಬೆಳಿಗ್ಗೆ ೯ ಕ್ಕೆ ಕಣ್ವಮಠದ ಶ್ರೀಗಳಿಂದ ಮುದ್ರಾಧಾರಣೆ ಜರುಗಲಿದೆ.
ಕೊಪ್ಪಳ ನಗರದ ಪ್ರಶಾಂತ ನಗರದಲ್ಲಿ ಅಂದು ಹುಣಸಿ ಹೊಳಿ ಕಣ್ವ ಮಠದ ಶ್ರೀ ೧೦೦೮ ಶ್ರೀ ವಿದ್ಯಾವಾರಿಧೀತೀರ್ಥರು ಭಕ್ತರಿಗೆ ಮುದ್ರಾಧಾರಣೆ ಮಾಡಲಿದ್ದಾರೆ,ರಾಜ್ಯದ ಎಲ್ಲಾಭಾಗಗಳಿಂದ ಮಠದ ಭಕ್ತರು ಆಗಮಿಸಲಿದ್ದರೆ.
ಶ್ರೀವಿಠ್ಠಲಕೃಷ್ಣ ಮಂದಿರದಲ್ಲಿ ಎಕಾದಶಿಯಂದುಬೆಳಿಗ್ಗೆ ೮ಕ್ಕೆ ಸುದರ್ಶನ ಹೋಮ ನಂತರ ೯ಕ್ಕೆ ಶ್ರೀಗಳಿಂದ ಮಠದ ಶಿಷ್ಯರಿಗೆ ತಪ್ತ ಮುದ್ರಾಧಾರಣೆ ಜರುಗಲಿದೆ.
ಶ್ರೀಗಳು ೧೪ರಂದು ಗುರುವಾರ ಸಂಜೆ ೬ಕ್ಕೆ ಕೊಪ್ಪಳದ ಶ್ರೀವಿಠ್ಠಲ ಕೃಷ್ಣ ದೇವಸ್ಥಾನಕ್ಕೆ ಆಗಮಿಸಲಿದ್ದು ಭಕ್ತರು ಆಗಮಿಸಿ ತಪ್ತ ಮುದ್ರಾಧಾರಣೆಯಲ್ಲಿ ಭಾಗವಹಿಸಿ ಶ್ರೀಗಳ ಆಶಿರ್ವಾದ ಪಡೆಯುವಂತೆ ಶ್ರೀಯೋಗಿಶ್ವರ ಯಾಜ್ಞಚಲ್ಕ್ಯ ಪ್ರತಿಷ್ಟಾನದ ಕಾರ್ಯದರ್ಶಿ ವೇಣುಗೋಪಾಲ ಜಹಗೀರದಾರ  ಕೋರಿದ್ದಾರೆ.

Leave a Reply

Top