ಆಲಿಕಲ್ಲು ಮಳೆ,ಬಿರುಗಾಳಿ: ಅತಂತ್ರ ಸ್ಥಿತಿಯಲ್ಲಿ ಚಂಡೂರ ಗ್ರಾಮಸ್ಥರು

koppal-heavy-rain (1) koppal-heavy-rain (2) koppal-heavy-rain (3) koppal-heavy-rain (4)

ಕುಕನೂರ :ಭೀಕರ ಬರಗಾಲದಿಂದ ತತ್ತರಿಸಿದ ಜನತೆ ಶನಿವಾರ ರಾತ್ರಿ ಅಲ್ಪ ಸ್ವಲ್ಪ ಬಂದ ಮಳೆಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು ಆದರೆ ಆ ನೆಮ್ಮದಿ ಮಾತ್ರ ಚಂಡೂರ ಗ್ರಾಮದ ಜನತೆಗೆ ಅಕ್ಷರಶ: ಶಾಪವಾಗಿ.ಕಾಡಿದೆ.ಚಂಡೂರ ಗ್ರಾಮದ ಕೆಲ ನಿವಾಸಿಗಳು ಸೂರು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.ಅಡುಗೆ ಮಾಡಿಕೊಳ್ಳಬೇಕೆಂದರೂ ದಿನಸಿ ಪದಾರ್ಥಗಳೆಲ್ಲವೂ ಮಳೆಯಲ್ಲಿ ಮಣ್ಣುಪಾಲಾಗಿವೆ.ಸಂಬಂಧಿಸಿದ ಅಧಿಕಾರಿಗಳು ಸಕಾಲಕ್ಕೆ ಬಾರದಿದ್ದಕ್ಕೆ ಅಲ್ಲಿನ ಜನತೆ ರೋಸಿಹೋಗಿದ್ದಾರೆ. ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸಮೀಪದ ಕೊಪ್ಪಳ ಜಿಲ್ಲೆಯ ಚಂಡೂರ ಗ್ರಾಮದಲ್ಲಿ ಶನಿವಾರ ರಾತ್ರಿ ಸುಮಾರು ೧೨ ಘಂಟೆಗೆ ಸಂಭವಿಸಿದ ಆಲಿಕಲ್ಲು ಮಳೆ ಹಾಗೂ ಬಿರು ಗಾಳಿಯ ಹೊಡೆತಕ್ಕೆ ಸಿಲುಕಿ ಓರ್ವ ವೃದ್ದೆ ತೀವೃ ಘಾಯಗೊಂಡರೆ ಇನ್ನೋರ್ವ ವೃದ್ಧನಿಗೆ ಬೆನ್ನಿಗೆ ಘಾಯವಾಗಿದೆ ಚಿಕ್ಕ ಮಗುವಿವ ಕೈ ಕಟ್ಟಾಗಿದ್ದು ಎಮ್ಮೆ ಹಾಗೂ ಹೋರಿಯ ಕರುವಿಗೆ ಗಂಭೀರ ಘಾಯವಾಗಿದೆ.ಘಾಯಗೊಂಡವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ
ಗೌರಮ್ಮ ಚಂದ್ರಪ್ಪ ಜ್ಯೋತಿ (೬೫) ಎನ್ನುವ ವೃದ್ಧೆ ಚಂಡೂರ ಗ್ರಾಮದ ಆಶ್ರಯ ಕಾಲೋನಿಯ ಮನೆಯಲ್ಲಿ ಮಲಗಿಕೊಂಡಿರುವಾಗ ತೀವೃವಾಗಿ ಬೀಸಿದ ಬಿರುಗಾಳಿಗೆ ರಭಸದಿಂದ ಬಂದ ಹಿಂದಿನ ಮನೆಯ ಇಟ್ಟಂಗಿಗಳು ತಲೆಗೆ ಬಿದ್ದಿದ್ದರ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಆಕೆಯನ್ನು ಅಂಬೈಲೆನ್ಸ್ ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೆ,ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ಯಿರಿ ಎನ್ನುತಿದ್ದಾರೆಂದು ಸ್ಥಳೀಯ ಈರಪ್ಪ ಚಂಡೂರ ಪತ್ರಿಕೆಗೆ ತಿಳಿಸಿದ್ದಾರೆ.
ಗಾಳಿಯ ರಭಸಕ್ಕೆ ತಗಡು ಬೆನ್ನಿಗೆ ಹಾರಿಬಿದ್ದಿದ್ದರಿಂದ ಚಂದ್ರಪ್ಪ ಕರಿಯಪ್ಪ ಜ್ಯೋತಿ ಎನ್ನುವವರಿಗೂ ಬಲವಾದ ಘಾಯವಾಗಿದೆ.ಹನಮೇಶ ಮಲ್ಲಪ್ಪ ಜ್ಯೋತಿ ಎನ್ನುವ ಬಾಲಕನ ಕೈ ಮೇಲೆ ತಗಡು ಬಿದ್ದಿದ್ದರಿಂದ ಕೈ ಕಟ್ಟಾಗಿದೆ ಎನ್ನಲಾಗಿದೆ.
ಹನಮಪ್ಪ ಭೀಮಪ್ಪ ಜ್ಯೋತಿ ಎನ್ನುವವರಿಗೆ ಸೇರಿದೆ ಎನ್ನಲಾದ ಎಮ್ಮೆಯ ಹಣಗೆ ತರುಚಿದ ಘಾಯವಾದರೆ ನೀಲಪ್ಪ ನಿಂಗಪ್ಪ ನಂಗಾಪೂರ ಎನ್ನುವವರಿಗೆ ಸೇರಿದ ಆಕಳು ಕರುವಿನ ಬೆನ್ನಿಗೆ ಬಲವಾದ ಘಾಯವಾಗಿದೆ ಆದರೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಮೂಕ ಜಾನುವಾರುಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಹೊಲವನ್ನು ೧ ಕ್ಷ ರೂ ಬಡ್ಡಿಗೆ ಹಾಕಿ ಮನೆ ಕಟ್ಟಿಸಿಕೊಂಡಿದ್ದೆನು,ಮನೆಯ ಮೇಲಿನ ಸೂರು ನೆಲಕಚ್ಚಿಹೋಗಿದೆ ಮತ್ತೆ ಮನೆಯನ್ನು ಮೊದಲಿನಂತೆ ಮಾಡಬೇಕೆಂದರೆ ಸಾಲವನ್ನೇ ಮಾಡಬೇಕು ಈ ಭೀಕರ ಬರಗಾಲದಲ್ಲಿ ನನಗೆ ಯಾರು ಸಾಲಕೊಡುತ್ತಾರೆ ಎಂದು ಚಿಂತಾಕ್ರಾಂತನಾಗುತ್ತಾನೆ ಮಲ್ಲಪ್ಪ ಚಂಡ್ರಪ್ಪ ಜ್ಯೋತಿ.
ಬೀಸಿದ ಬಿರುಗಾಳಿಗೆ ನನ್ನ ೬ ತಗಡುಗಳು ಹಾರಿಹೋಗಿವೆ,ಸಾಕಷ್ಟು ನಷ್ಟವಾಗಿದೆ ಎನ್ನುತ್ತಾನೆ ಯಂಕಪ್ಪ ಫಕೀರಪ್ಪ ಜ್ಯೋತಿ.
ದುಡಿಯಲು ಬೇರೆ ಊರಿಗೆ ಹೋಗಿದ್ದರಿಂದ ಪ್ರಾಣ ಬಚಾವಾಯಿತು ಇರದಿದ್ದರೆ ಮನೆ ಕುಸಿದು ಮೈಮೇಲೆ ಬೀಳುತಿತ್ತು ಎನ್ನುತ್ತಾರೆ ನಿಂಗಯ್ಯ ಸಂಕಿನಮಠದ ಸಂಬಂಧಿ ಜಂಬಯ್ಯ.
ಇನ್ನು ದೇವವ್ವ ಹರಿಜನ ಇವರ ಮನೆಯಲ್ಲಿ ನೀರು ಹೊಕ್ಕು ಧವಸ ಧಾನ್ಯ ಹಾಳಾದರೆ,ಮಲ್ಲಪ್ಪ ಉಪ್ಪಾರ,ನಿಂಗಪ್ಪ ಮುಧೋಳ,ಅನ್ನಪೂರ್ಣ ಯಂಕಪ್ಪ ಜ್ಯೋತಿ,ಹನಮವ್ವ ತಳವಾರ,ನಿಂಗಪ್ಪ ಉಪ್ಪಾರ,ಬಸಮ್ಮ ಹೂಗಾರ,ಹನಮಪ್ಪ ಹಂದ್ರಾಳ ಮನೆಗಳ ಸೂರಿನ ಮೇಲ್ಛಾವಣೆ ತಗಡುಗಳು ಹಾರಿಹೋಗಿವೆ,ತಗಡಿನ ಮೇಲೆ ಆಸರೆಗೆಂದು ಇರಿಸಿದ್ದ ಕಲ್ಲು,ಇಟ್ಟಂಗಿಗಳು ಮನೆಯೊಳಗಡೆ ಬಿದ್ದು ಸಾಮಾನು ಸರಂಜಾಮುಗಳನ್ನು ನುಚ್ಚು ನೂರಾಗಿಸಿವೆ.
ನೆಲ ಕಚ್ಚಿದ ನೆಲ್ಲು : ಶನಿವಾರ ತಡ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ೫ ಎಕರೆ ನೆಲ್ಲು ಗದ್ದೆ ಸಂಪೂರ್ಣ ನೆಲಕಚ್ಚಿದೆ.ಬಿರು ಗಾಳಿಗೆ ನೆಲ್ಲು ಸಂಪೂರ್ಣ ನೆಲದ ಪಾಲಾಗಿದ್ದು ರೈತ ಯಮನೂರಪ್ಪ ರೋಧಿಸುತ್ತಾ ಕುಳಿತುಕೊಂಡಿರುವ ದೃಶ್ಯ ಎಂಥ ಕಲ್ಲು ಹೃದಯದವರನ್ನು ಕರಗಿಸದೇ ಇರದು.
ರೈತ ನೆಲ್ಲು ಗದ್ದೆಯನ್ನೇ ನೆಂಬಿಕೊಂಡು ೧.೫ ಲಕ್ಷ ರೂ ಸಾಲ ಮಾಡಿತಂದಿದ್ದು ಅದನ್ನು ಹೇಗೆ ತೀರಿಸಬೇಕು ಎನ್ನುವ ಚಿಂತೆಯಲ್ಲಿದ್ದಾನೆ.ಮೇಲಾಗಿ ಈ ರೈತನಿಗೆ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತಿದ್ದಾನೆ.
ಸ್ಥಳಕ್ಕೆ ಭೆಟಿ : ಘಟನಾ ಸ್ಥಳಕ್ಕೆ ಯಲಬುಗಾ ತಹಶೀಲ್ದಾರ,ಕುಕನೂರ ನಾಡ ತಹಶೀಲ್ದಾರ,ಪಿ ಎಸ್ ಐ ವಿಶ್ವನಾಥ ಹಿರೇಗೌಡ್ರ,ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದರು.

Leave a Reply