Breaking News
Home / Koppal News-1 / koppal news / ಆರ್‌ಟಿಇ ದಾಖಲಾತಿ ಮೇ.೨೫ ರ ವರೆಗೆ ಅವಧಿ ವಿಸ್ತರಣೆ

ಆರ್‌ಟಿಇ ದಾಖಲಾತಿ ಮೇ.೨೫ ರ ವರೆಗೆ ಅವಧಿ ವಿಸ್ತರಣೆ

ಶಿಕ್ಷಣ ಹಕ್ಕು ಕಾಯ್ದೆಯಡಿ ಆಯ್ಕೆಯಾದ ಮಕ್ಕಳ ದಾಖಲಾತಿಗೆ ಅವಧಿಯನ್ನು ಮೇ ೨೫ ರವರೆಗೆ ವಿಸ್ತರಿಸಲಾಗಿದೆ.
ಪ್ರಸಕ್ತ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊದಲನೇ ಹಂತದ ಆನ್‌ಲೈನ್ ಲಾಟರಿ ಪ್ರಕ್ರಿಯೆ ನಡೆಸಿ ಹೆಚ್ಚಿನ ಕಾಲಾವಕಾಶದ ಅವಶ್ಯವಿದ್ದುದರಿಂದ ಇಲಾಖೆಯು ದಾಖಲಾತಿಗೆ ಮೇ ೨೩ ಗಡುವು ನೀಡಲಾಗಿತ್ತು ಈಗ ಮೇ.೨೫ ರವರೆ ಅವಧಿ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ನೆರೆಹೊರೆಯ ಹೊರಗಿನ ಶಾಲೆಗಳಲ್ಲಿ ಸೀಟು ಹಂಚಿಕೆಯಾಗಿರುವ ಕಾರಣದಿಂದ ತಿರಸ್ಕರಿಸಲ್ಪಟ್ಟ ಅರ್ಜಿದಾರರು ಆತಂಕ ಪಡುವ ಅವಶ್ಯ ಇಲ್ಲ. ಅಂತಹ ಅರ್ಜಿಗಳನ್ನು ಮೇ.೨೫ ರ ನಂತರ ನೆರೆಹೊರೆಯ ವ್ಯಾಪ್ತಿಯ ಒಳಗಿನ ಶಾಲೆಗೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳಲ್ಲಿ ಶಾಲೆಗಳ ಹೆಸರನ್ನು ಪರಿಷ್ಕರಿಸಿ ತಂತ್ರಾಂಶದಲ್ಲಿ ನಮೂದಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುವುದು.
ಶಿಕ್ಷಣ ಹಕ್ಕು ಕಾಯ್ದೆಯಡಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ನೆರಹೊರೆಯ ವ್ಯಾಖ್ಯಾನವನ್ನು ವಾರ್ಡ್ ವ್ಯಾಪ್ತಿಗೆ ಸೀಮಿತಗೊಳಿಸದೇ ಶಾಲೆಯಿಂದ ೧ ಕಿ.ಮೀ. ವ್ಯಾಪ್ತಿ ಎಂದು ಪರಿಗಣಿಸಿ ಈಗಾಗಲೇ ಸೀಟು ಹಂಚಿಕೆಯಾಗಿರುವ ಅರ್ಜಿಗಳನ್ನು ಸಂಬಂಧಿಸಿದ ಶಾಲೆಗಳಿಗೆ ದಾಖಲಾತಿಗಾಗಿ ಪರಿಗಣಿಸಲು ತಿಳಿಸಲಾಗಿದ್ದು ಮೊದಲನೇ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪಾಲಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕರಿಗಳನ್ನು ಸಂಪರ್ಕಿಸಿ ದಾಖಲಾತಿಗಾಗಿ ಕ್ರಮ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

About admin

Leave a Reply

Scroll To Top