ಆದರ್ಶ ಮಹನೀಯರ ಹಾದಿಯಲ್ಲಿ ನಡೆಯಲು ಪ್ರಯತ್ನಿಸಬೇಕು-ಸತ್ಯೇಂದ್ರ

rainbow_school_koppal_news
ಕೊಪ್ಪಳ, ನ.೧೮. ನಾವು ನಮ್ಮ ಜೀವನದ ಹಾದಿಯುದ್ಧಕ್ಕೂ ಆದರ್ಶ ಮಹನೀಯರನ್ನು ನೆನೆಯುತ್ತಾ ಅವರ ಉತ್ತಮ ವಿಚಾರಧಾರೆಗಳನ್ನು ಅಳವಡಿಸಿಕೊಂಡು ನಡೆಯಲು ಪ್ರಯತ್ನಿಸಬೇಕು ಎಂದು ಶ್ರೀ ಸಾಯಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಸತ್ಯೇಂದ್ರ ಹೇಳಿದರು.
ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ರೇನಬೋ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ನೆಹರು ಜಯಂತಿ ಹಾಗೂ ಕನಕದಾಸ ಜಯಂತಿ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು, ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ, ಶಿಕ್ಷಣದ ಜೊತೆಗೆ ವಿನಯ ಮತ್ತು ಸಂಸ್ಕಾರವನ್ನು ಕಲಿಯಬೇಕು, ವಿನಯವಿಲ್ಲದ ಶಿಕ್ಷಣ ಅಪಾಯಕಾರಿ ಎಂದರು.
ಇದೇ ವೇಳೆ ಮಕ್ಕಳಿಗೆ ಹಾಗೂ ಪೋಷಕರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೇಮಂತಕುಮಾರ, ವೆಂಕಟರಮಣ ಇತರರು ಇದ್ದರು.
ಶಿಕ್ಷಕಿ ಶಿಲ್ಪಾ ದೇಶಪಾಂಡೆ ಪ್ರಾರ್ಥಿಸಿದರು, ರಾಜಕುಮಾರ ಸ್ವಾಗತಿಸಿದರು, ಸ್ವರ್ಣಲತಾರೆಡ್ಡಿ ನಿರ್ವಹಿಸಿದರು, ಕೊನೆಯಲ್ಲಿ ಸೌಮ್ಯ ಎಸ್. ಜಿ. ವಂದಿಸಿದರು.
ಮಕ್ಕಳ ಛದ್ಮ ವೇಷ ಸ್ಪರ್ಧೆಯಲ್ಲಿ : ಪ್ಲೇ ಹೋಮ್ ವಿಭಾಗ ನಾಗರನಿಕಾ ಪ್ರಥಮ, ಅಭಿನವ ದ್ವಿತಿಯ, ಅಕ್ಷರ ಗೊಂಡಬಾಳ ತೃತೀಯ, ನರ್ಸರಿ ವಿಭಾಗದಲ್ಲಿ ಬೇವಿನ್ ಪ್ರಥಮ, ವಿಶೃತ್ ದ್ವಿತಿಯ ಮತ್ತು ವಾಸಿಮ್ ತೃತೀಯ, ಎಲ್‌ಕೆಜಿ ವಿಭಾಗದಲ್ಲಿ ಆರತಿ ಪ್ರಥಮ ಮತ್ತು ವಿಶ್ವಾಸ ದ್ವಿತಿಯ ಬಹುಮಾನ ಪಡೆದರು.
ಮಕ್ಕಳ ಕ್ರೀಡಾ ಸ್ಪರ್ಧೆಯಲ್ಲಿ ಪ್ಲೇ ಹೋಂ ವಿಭಾಗದಲ್ಲಿ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಅಕ್ಷರ ಎಂ. ಗೊಂಡಬಾಳ ಪ್ರಥಮ, ಕ್ರೀವಿ ದ್ವಿತಿಯ ಹಾಗೂ ಶ್ರೀಪಾದರಾವ್ ತೃತೀಯ, ನರ್ಸರಿ ವಿಭಾಗದ ಓಟದ ಸ್ಪರ್ಧೆಯಲ್ಲಿ ಗಗನ್ ಪ್ರಥಮ, ಅರ್ಪಿತಾ ದ್ವಿತಿಯ ಮತ್ತು ಶ್ರೇಯಾ ತೃತೀಯ ಹಾಗೂ ಎಲ್‌ಕೆಜಿ ಮಕ್ಕಳ ಬುಕ ಬ್ಯಾಲೆನ್ಸ್ ಸ್ಪರ್ಧೆಯಲ್ಲಿ ವಿಶ್ವಾಸ ಪ್ರಥಮ, ಆರತಿ ದ್ವಿತಿಯ ಮತ್ತು ಪ್ರಣವಿ ತೃತೀಯ ಬಹುಮಾನ ಪಡೆದುಕೊಂಡರು.
ಪೋಷಕರ ಸ್ಪರ್ಧೆಯಲ್ಲಿ ತಾಯಂದಿರ ನೋ ಫಯರ್ ಅಡುಗೆ ಸ್ಪರ್ಧೆಯಲ್ಲಿ ಶಾಮಲ ಪ್ರಥಮ, ಮಂಜುಳಾ ದ್ವಿತಿಯ ಮತ್ತು ಶ್ಯಾಮಲಾ ತೃತೀಯ ಸ್ಥಾನ ಪಡೆದುಕೊಂಡರು, ತಂದೆಯರಿಗೆ ನಡೆದ ಸಂಗೀತ ಖುರ್ಚಿ ಆಟದಲ್ಲಿ ಮಂಜುನಾಥ ಜಿ. ಗೊಂಡಬಾಳ ಪ್ರಥಮ ಹಾಗೂ ತಾಯಂದಿರ ಸಂಗೀತ ಖುರ್ಚಿ ಆಟದಲ್ಲಿ ಮೌಲಾಬಾಯಿ ಪ್ರಥಮ ಬಹುಮಾನ ಪಡೆದುಕೊಂಡರು.

Please follow and like us:
error