ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದ- ಎರಡು ಸಿಂಹಗಳ ಸಾವಿಗೆ ಕಾರಣನಾದ !

lion1

ಜೀವನದಲ್ಲಿ  ಜಿಗುಪ್ಸೆ ಹೊಂದಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳಲು  ಸಿಂಹಗಳ ಭೋನಿಗೆ ಜಿಗಿದ . ಆದರೆ ಆ ವ್ಯಕ್ತಿಯೇನೋ ಬದುಕುಳಿದ ಆದರೆ  ಎರಡು ಸಿಂಹಗಳ ಸಾವಿಗೆ ಕಾರಣನಾದ !   ಇಂತಹ ವಿಚಿತ್ರ ಘಟನೆಯೊಂದು ಸ್ಯಾಂಟಿಯಾಗೋದಲ್ಲಿ ನಡೆದಿದೆ. 20ರ ಹರೆಯದ ವ್ಯಕ್ತಿಯೋರ್ವ ಸಾಯುವ ಸ್ಯಾಟಿಯಾಗೋದ ಜೂಗೆ ತೆರಳಿದ ತನ್ನ ಬಟ್ಟೆಗಳನ್ನು ಬಿಚ್ಚಿಟ್ಟವನೇ ನಗ್ನವಾಗಿ  ನೇರವಾಗಿ ಸಿಂಹಗಳ ಬಾಯಿಗೆ ಆಹಾರವಾಗಲು ಜಿಗಿದ. ಎರಡು ಸಿಂಹಗಳೇನೋ ಆತನ ತಲೆಗೆ ತೊಡೆಗೆ ಬಾಯಿ ಹಾಕಿದವು. ಆದರೆ ಅವುಗಳ ಅಧೃಷ್ಟ ಸರಿಯಿರಲಿಲ್ಲ. ಜೂ ನಲ್ಲಿ  ಕಾರ್ಯನಿರ್ವಹಿಸುತ್ತಿದ್ದ  ಸಿಬ್ಬಂದಿಗಳು ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ಸಿಂಹಗಳಿಗೆ ಗುಂಡಿಟ್ಟು ಸಾಯಿಸಿದರು. ವ್ಯಕ್ತಿ ಬದುಕುಳಿದ ಆತನ ಬಟ್ಟೆಗಳನ್ನು ತಪಾಸಣೆ ಮಾಡಿದಾಗ ಸಿಕ್ಕಿದ್ದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಡೆತ್ ನೋಟ್.. ನಮಗೆ ಸಿಂಹಗಳ ಜೀವಕ್ಕಿಂತ ವ್ಯಕ್ತಿಯ ಜೀವ ಮುಖ್ಯವಾಗಿತ್ತು. ಹೀಗಾಗಿ ಅವುಗಳನ್ನು ಕೊಲ್ಲಲೇ ಬೇಕಾಯಿತು ಎನ್ನುತ್ತಾರೆ ಆ ಸಿಬ್ಬಂದಿ. ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಸಿಂಹಗಳ ಬಾಯಿಗೆ ಸಿಲುಕಿ ಬದುಕಿದ್ದು ಹೇಗೆ  ಅಂತೀರಾ ಈ ವಿಡಿಯೋ ನೋಡಿ.

 

Leave a Reply