ಅಮ್ ಆದ್ಮಿ ಪಾರ್ಟಿಯಿಂದ ಪ್ರತಿಭಟನೆ

 

aap-koppalಅಮ್ ಆದ್ಮಿ ಪಾರ್ಟಿಯಿಂದ ಪ್ರತಿಭಟನೆ
ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿಗೆ ಮನವಿ

ಕೊಪ್ಪಳ: ನಗರದ ಬಸವೇಶ್ವರ ವೃತ್ತದಲ್ಲಿ ವೃತ್ತದಲ್ಲಿ ಶನಿವಾರದಂದು ಬೆಳಗ್ಗೆ ಮಹಾದಾಯಿ ಯೋಜನೆಯಲ್ಲಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಬೀಮಗಡದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತಿರುವ ಮಹಾದಾಯಿ ನೀರನ್ನು ಪ್ರತಿ ವರ್ಷ ಬರದಿಂದ ಬಳಲಿ ಬೆಂಡಾಗುತ್ತಿರುವ ಉತ್ತರ ಕರ್ಣಾಟಕ ಜನರಿಗೆ ಕುಡಿಯಲು ಹಾಗೂ ಕೃಷಿಗೆ ಒದಗಿಸಲು ನಡೆಸಿ ಹೋರಾಟಕ್ಕೆ ರಾಜಕರಾರಣಿಗಳ ಲಜ್ಜೆಗೇಡಿತನ, ಮುಖ್ಯಮಂತ್ರಿಗಳ ಬೇಜಾವಾಬ್ದಾರಿತನ ಹಾಗೂ ಪ್ರಧಾನ ಮಂತ್ರಿಗಳ ನಿರ್ಲಕ್ಷತನ ಹಾಗೂ ಕರ್ನಾಟಕ ವಿರೋದಿ ನಿಲುವಿನಿಂದಾಗಿ ಸೋಲಾಗಿದೆ. ಇದು ರಾಜ್ಯ ಜನತೆಗೆ ಕರ್ನಾಟಕವನ್ನು ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಒಟ್ಟಾಗಿ ಮಾಡಿರುವ ಬೃಹತ ವಂಚನೆ. ಇಂದು ೨೮ ಜನ ಸಂಸದರ ಹಾಗೂ ೨೨೪ ಶಾಸಕರ ಪಾಲಿಗೆ ಉತ್ತರ ಕರ್ನಾಟಕದ ಜನತೆಯ ಕೂಗೂ ಕೇಳದಾಗಿದ್ದರೆ ಅವರು ಪಾಲಿಗೆ ಜನರು ಸತ್ತಿದ್ದಾರಯೇ? ಎಂಬುದನ್ನು ಅವರೇ ಜಾಹಿರುಪಡಿಸಬೇಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Please follow and like us:
error