ಅಮರ ರಹೇ ವೀರ ಜವಾನ ಹಸನಸಾಬ

IMG-20160731-WA0003

ಕಾಶ್ಮೀರದಲ್ಲಿ  ನಡೆದ   ಉಗ್ರರ ವಿರುದ್ದ ಕಾರ್ಯಾಚರಣೆಯಲ್ಲಿ ಬಾಂಬ್ ಸ್ಪೋಟಕ್ಕೆ ಬಲಿಯಾಗಿದ್ದಾರೆ ಹಸನ್‌ ಸಾಬ್ ಖುದಾವಂದ್ . ನವಲಗುಂದ ತಾಲೂಕಿನ ಸೈದಾಪುರ ಗ್ರಾಮದ ಹಸನ್‌ ಸಾಬ್ ಖುದಾವಂದ್ ( 24) . 3 ವರ್ಷಗಳಿಂದ ಬಿಎಸ್ ಎಪ್ ನಲ್ಲಿ ಕೆಲಸ ಮಾಡುತ್ತಿದ್ದರು.  ಎಂಆರ್‌ಸಿ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಜಮ್ಮುವಿನಲ್ಲಿ ಕೆಲಸ ಮಾಡುತ್ತಿದ್ದರು.
ನಿಯಂತ್ರಣ ರೇಖೆ ಬಳಿ ಗಡಿ ನುಸುಳುತ್ತಿದ್ದ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಉಗ್ರರು ಎಸೆದ ಗ್ರೇನೆಡ್ ಸಿಡಿದು ಹಸನ್ ಸಾಬ್ ಹುತಾತ್ಮರಾಗಿದ್ದಾರೆ. ಮೃತರ ಪಾರ್ಥಿವ ಶರೀರ ಸೋಮವಾರ  ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ.

Leave a Reply