fbpx

ಅಖಿಲ ಭಾರತ ಅಂಚೆ ನೌಕರರ ಸಂಘದಿಂದ ಪ್ರತಿಭಟನೆ

post_office_koppal

ಕೊಪ್ಪಳ ಃ ಕೇಂದ್ರ ಸರ್ಕಾರಿ ನೌಕರರ ಸಂಘಗಳ ಒಕ್ಕೂಟ ನವದೆಹಲಿ ಆದೇಶದ ಮೇರೆಗೆ ೧೬-೦೩-೨೦೧೭ ರಂದು ಕೊಪ್ಪಳದ ಪ್ರಧಾನ ಅಂಚೆ ಕಚೇರಿ ಮುಂದುಗಡೆ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಯಿತು. ೧೦-೧೨-೨೦೧೫ ರಂದು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು ೭ನೇ ವೇತನ ಆಯೋಗದ ವರದಿಯಲ್ಲಿನ ನ್ಯೂನತೆಗಳ ಪುನರ್ ಪರಿಶೀಲನೆಗಾಗಿ ಕೇಂದ್ರ ಸಂಪುಟ ಕಾರ್ಯದರ್ಶಿಗಳೀಗೆ ಸಲ್ಲಿಸಿದ ಬೇಡಿಕೆಗಳನ್ನು ಇತ್ಯರ್ಥಗೊಳಿಸುವುದು ಹಾಗೂ ತಾ.೩೦-೦೬-೨೦೧೬ ಮತ್ತು ೦೬-೦೭-೨೦೧೬ ರಂದು ರಾಷ್ಟ್ರೀಯ ಜಂಟಿಕ್ರಿಯಾಸಮಿತಿಗೆ ಕೇಂದ್ರ ಮಂತ್ರಿಗಳು ನೀಡಿದ ಆಶ್ವಾಸನೆಗಳನ್ನು ವಿಶೇಷವಾಗಿ ಕನಿಷ್ಟವೇತನದಲ್ಲಿ ಹೆಚ್ಚಳ ಹಾಗೂ ಫಿಟ್‌ಮೆಂಟ್ ಸೂತ್ರಗಳನ್ನು ತಡಮಾಡದೆ ಜಾರಿಗೊಳಿಸುವುದು.
ಮನೆಬಾಡಿಗೆ ಭತ್ಯೆ, ಹಾಲಿಯಿರುವ ಶೇಕಡಾವಾರು ೩೦%, ೨೦% ಹಾಗೂ ೧೦%ನ್ನು ಉಳಿಸಿಕೊಂಡು ಸಂಚಾರಭತ್ಯೆಯನ್ನು ರಾಷ್ರ್ಟೀಯ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಯಂತೆ ಹೆಚ್ಚಿಸುವುದು ಹಾಗೂ ೭ನೇ ವೇತನ ಆಯೋಗದ ಶಿಫಾರಸ್ಸಿನಿಂದ ಉಂಟಾಗಿರುವ ಎಲ್ಲಾ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಪರಿಹರಿಸುವುದು.
೭ನೇ ವೇತನ ಆಯೋಗವು ೨೦೧೬ಕ್ಕೆ ಮುಂಚಿನ ಪಿಂಚಣಿದಾರರಿಗೆ, ಪಿಂಚಣಿ ಸಮನ್ವಯ ಕುರಿತು ನೀಡಿರುವ ಶಿಫಾರಸ್ಸನ್ನು ಸರ್ಕಾರವು ಸಹ ಒಪ್ಪಿಕೊಂಡಿದ್ದು, ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು ಪಿಂಚಣಿಗೆ ಸಂಬಂಧಪಟ್ಟಂತೆ ಸಂಪುಟ ಕಾರ್ಯದರ್ಶಿಗಳಿಗೆ ದಿನಾಂಕ ೧೦-೧೨-೨೦೧೫ ರ ಜ್ಞಾಪನಾಪತ್ರದ ಕ್ರಮಸಂಖ್ಯೆ ೧೩ನ್ನು ಇತ್ಯರ್ಥಗೊಳಿಸುವುದು.
ಪಿ.ಎಫ್.ಆರ್.ಡಿ.ಎ ಕಾಯಿದೆ ಮತ್ತು ಹೊಸ ಪಿಂಚಣಿ ಪಧ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಕೇಂದ್ರ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡುವುದು.
ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲಾ ಭತ್ಯೆಗಳನ್ನು ನೀಡುವುದು.
ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡುವುದು. ಸರ್ಕಾರಿ ಕೆಲಸಗಳನ್ನು ಖಾಸಗೀಕರಣ ಹೊರಗುತ್ತಿಗೆ ಕೊಡುವುದನ್ನು ನಿಲ್ಲಿಸುವುದು ಸೇರಿದಂತೆ ಅನೇಕ ಬೇಡಿಕೆಗಳಿಗೆ ಒತ್ತಾಯಿಸಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಯಿತು.
ಕೊಪ್ಪಳ ಜಿಲ್ಲಾ ಅಂಚೆ ನೌಕರರ ಕಾರ್ಯದರ್ಶಿಗಳಾದ ಜಿ.ಎನ್. ಹಳ್ಳಿ, ಸಹಕಾರ್ಯದರ್ಶಿ ಸರ್ವೋತ್ತಮ ಉಪಾಧ್ಯಾಯ, ವಲಯ ಸಲಹಾ ಸಮಿತಿಯ ಸದಸ್ಯರಾದ ಡಿ.ಎಂ. ದ್ರಾಕ್ಷಿ, ಹೇಮರಡ್ಡಿ ಕೋಳೂರು, ಸಕ್ರಪ್ಪ ಹೂಗಾರ, ಬಿ.ವಿ.ಅಂಗಡಿ, ಯಲ್ಲಪ್ಪ ವಾಯ್. ಕೋಳೂರು, ಜಗದೀಶ ಛಲವಾದಿ, ಉಷಾ.ಆರ್, ತೇಜಾವತಿ ಇನಾಮದಾರ, ನಾರಾಯಣ ಇಂದರಗಿ, ಶರಣಯ್ಯಸ್ವಾಮಿ ಜೆ.ಎಂ., ಲಕ್ಷ್ಮೀನಾರಾಯಣ ಜಹಗೀರದಾರ ಮುಂತಾದವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!