ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ನಮಗೆಲ್ಲಾ ಆದರ್ಶವಾಗಬೇಕು – ರಾಘವೇಂದ್ರ ಹಿಟ್ನಾಳ

raghavendra_hitnal_sewa_ngo_koppal_rajabakshi_koppal raghavendra_hitnal_sewa_ngo_koppal savitribai_pule_sewa_ngo_koppal-vani_periyodi

ಕೊಪ್ಪಳ : ನೂರಾರು ವರ್ಷಗಳ ಹಿಂದೆಯೇ ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಕಾರಣಕ್ಕಾಗಿ ಹಲವಾರು ಸಂಕಷ್ಟಗಳನ್ನು ಎದುರಿಸಿದ ಮತ್ತು ಶಿಕ್ಷಣ ನೀಡಿದ ಭಾರತದ ಪ್ರಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ನಮಗೆಲ್ಲಾ ಆದರ್ಶವಾಗಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಕರೆ ನೀಡಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾ ಸಂಸ್ಥೆ ಮತ್ತು ಸೇವಾ ಕೌಟುಂಬಿಕ ಸಲಹಾ ಕೇಂದ್ರದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಹಾಗೂ ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮವನ್ನು ಸಾವಿತ್ರಿ ಬಾಯಿ ಪುಲೆಯವರ ಪುಸ್ತಕಗಳನ್ನು ಕಾಲೇಜು ಗ್ರಂಥಾಲಯಕ್ಕೆ ನೀಡುವದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎನ್ನುವದು ಕೆಲವೇ ಜನರ ಸ್ವತ್ತಾಗಿದ್ದ ಸಂದರ್ಭದಲ್ಲಿ ದಲಿತ, ಬಡ ಜನರಿಗೆ ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ಕೊಡಲು ಶ್ರಮಿಸಿದ ಸಾವಿತ್ರಿಬಾಯಿ ಪುಲೆ ಜೀವನ ಚರಿತ್ರೆ ಎಲ್ಲರೂ ಓದುವಂತಾಗಬೇಕು ಅವರ ತ್ಯಾಗ, ಬಲಿದಾನ ಸೇವೆಗಳನ್ನು ಸ್ಮರಿಸಬೇಕಲ್ಲದೇ ಅದನ್ನು ಆದರ್ಶವಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಕಾದಿರಿಸಿದೆ. ಹಿಂದೆ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ ಸಮಯದಲ್ಲಿ ೨೦ ಅಂಶಗಳ ಕಾರ‍್ಯಕ್ರಮಗಳಲ್ಲಿ ಗರಿಬೀ ಹಟಾವೋ ಕಾರ್ಯಕ್ರಮದ ಮೂಲಕ ಬಡತನ ನಿರ್ಮೂಲನೆ ಮಾಡಲು ಆ ಮೂಲಕ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದರು. ಮಹಿಳೆಯರಿಗೆ ರಾಜಕೀಯ ಮತ್ತು ಉದ್ಯೋಗ ಮೀಸಲಾತಿ ಕೊಡುವಲ್ಲಿ ಶ್ರಮಿಸಿದರು. ನಮ್ಮ ಭಾಗ ೩೭೧ಜೆ ಕಲಂ ಅಡಿಯಲ್ಲಿ ಬರುವುದರಿಂದ ಇಲ್ಲಿ ಉದ್ಯೋಗವಕಾಶಗಳು ಬಹಳಷ್ಟಿವೆ. ಹೀಗಾಗಿ ಹೆಣ್ಣು ಮಕ್ಕಳೂ ಸಹ ಶಿಕ್ಷಣವಂತರಾಗಬೇಕು. ಸಾವಿತ್ರಿಬಾಯಿ ಪುಲೆಯವರು ನಮಗೆಲ್ಲಾ ಆದರ್ಶವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ವಾಣಿ ಪೆರಿಯೋಡಿಯವರು ಮಹಿಳೆಯರು ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮುಂದಾಗಬೇಕು , ಅದಕ್ಕಾಗಿ ಮೊದಲು ಮಹಿಳೆಯರು ಜಾಗೃತಗೊಳ್ಳಬೇಕು. ಜಾಗೃತಿಗಾಗಿ ಶಿಕ್ಷಣದ ಅವಶ್ಯಕತೆ ಇದೆ. ಮಹಿಳೆಯರು ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಆಗಷ್ಟೇ ಬದಲಾವಣೆ ಸಾಧ್ಯ ಎಂದರು. ಅಲ್ಲದೇ ವೇದಿಕೆಯ ಮೇಲೆ ಏಕವ್ಯಕ್ತಿ ನಾಟಕಪ್ರದರ್ಶನ ಸಹ ಮಾಡಿದರು. ಇದು ಮಕ್ಕಳನ್ನು ಸೆಳೆಯಿತು. ಮಾರ್ಚ ತಿಂಗಳ ೮ ಮತ್ತು ೯ ರಂದು ನಡೆಯಲಿರುವ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಕೋರಿದರು. ಪ್ರಾಸ್ತಾವಿಕವಾಗಿ ಸಂಸ್ಥೇಯ ಅಧ್ಯಕ್ಷ ಎಚ್.ವಿ.ರಾಜಾಬಕ್ಷಿ ಮಾತನಡಿದರು. ವೇದಿಕೆಯ ಮೇಲೆ ತಾಲೂಕ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರನ್, ಸಿಡಿಪಿಓ ಇಮಾಲಪ್ಪ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಕಾಂಗ್ರೆಸ ಮುಖಂಡರಾದ ಪ್ರಸನ್ನ ಗಡಾದ ಸುರೇಶ ಭೂಮರಡ್ಡಿ,ಕರಿಯಪ್ಪ ಮೇಟಿ , ಪ್ರಾಚಾರ‍್ಯರಾದ ಬಸವರಾಜ್ ಉಪಸ್ಥಿತರಿದ್ದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎಂ.ಶಂಶುದ್ದೀನ್, ವಹಿಸಿದ್ದರು. ಅಶ್ವಿನಿಯವರು ಸ್ವಾಗತ ಕೋರಿದರು. ಕಾರ‍್ಯಕ್ರಮದ ನಿರೂಪಣೆ ರವಿ ಮಾಟಲದಿನ್ನಿ ಮಾಡಿದರು ಮತ್ತ್ತು ವಂದನಾರ್ಪಣೆಯನ್ನು ದಾವಸಾಬ ಬೆಟಗೇರಿ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕ ರಾಘವೇಂಧ್ರ ಹಿಟ್ನಾಳ, ತಾಲೂಕ ಪಂಚಾಯತ್ ಅರ್ಧಯಕ್ಷ ಬಾಲಚಂದ್ರನ್ ಹಾಗೂ ಉಪನ್ಯಾಸ ನೀಡಿದ ವಾಣಿ ಪೆರಿಯೋಡಿಯವರಿಗೆ ಆತ್ಮಿಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply