ಅಂಜುಮನ ಕಮೀಟಿಯಿಂದ ನೂತನ ಸಚಿವರಾದ ಬಸವರಾಜ ರಾಯರೆಡ್ಡಿಯವರಿಗೆ ಸನ್ಮಾನ

anjuman-koppal-cotton-pasha-minister
ಕೊಪ್ಪಳ : ಅಂಜುಮನ್ ಕಮೀಟಿಯ ವತಿಯಿಂದ ನೂತನ ಉನ್ನತ ಶಿಕ್ಷಣ ಸಚಿರಾದ ಬಸವರಾಜ ರಾಯರಡ್ಡಿಯವರಿಗೆ ಅಧ್ಯಕ್ಷರಾದ ಕಾಟನ್ ಪಾಶಾ ಹಾಗೂ ಸಂಘಡಿಗರಿಂದ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯದ ಉರ್ದು ಶಾಲೆಗಳ ಉನ್ನತೀಕರಣ ಹಾಗೂ ಶೈಕ್ಷಣಿಕ ಗುಣಮಟ್ಟ ಕಾಪಾಡಿ ಈ ಕೆಳಗಿನ ಬೇಡಿಕೆಗಳ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲಯ ನಾಲ್ಕು ತಾಲೂಕಿನಲ್ಲಿ ಉರ್ದು ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಬೇಕು, ಜಿಲ್ಲಾ ಕೇಂದ್ರದಲ್ಲಿ ಉರ್ದು ಮಾಧ್ಯಮ ಪದವಿ ಕಾಲೇನ್ನು ಪ್ರಾರಂಭಿಸಬೇಕು, ಕೊಪ್ಪಳ ಜಿಲ್ಲೆಯಲ್ಲಿ ಉರ್ದು ಮಾಧ್ಯಮದ ಡಿ.ಎಡ್.ಮತ್ತು ಬಿ.ಎಡ್ ಕಾಲೇಜನ್ನು ಪ್ರಾರಂಭಿಸಬೇಕು, ರಾಜ್ಯದ ಎಲ್ಲಾ ಬಿ.ಇ.ಓ ಕಛೇರಿಗಳಲ್ಲಿ ಉರ್ದು ಶಿಕ್ಷಣ ಸಂಯೋಜಕ ಹುದ್ದೆಯನ್ನು ಮಂಜೂರು ಮಾಡಿಸಬೇಕು, ರಾಜ್ಯದ ಎಲ್ಲಾ ಜಿಲ್ಲೆಯಗಳಲ್ಲಿ ಉರ್ದು ವಿಷಯದ ಪರೀವಿಕ್ಷಕರ ಹುದ್ದೆಯನ್ನು ಮಂಜೂರು ಮಾಡಬೇಕು ಹಾಗೂ ಇನ್ನೂ ಮುಮತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸಂದರ್ಭದಲ್ಲಿಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿಸಾಬ್, ನಗರಸಭೆ ಅಧ್ಯಕ್ಷರಾದ ಮಹೇಂದ್ರ ಛೋಪ್ರಾ, ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಕಾಟನ್ ಪಾಶಾ, ಕಾಂಗ್ರೆಸ್ ಮುಖಂಡರರಾದ ಕೆ.ಎಂ ಸೈಯದ್, ಅಮಜದ್‌ಪಟೇಲ್, ಮಾನ್ವಿ ಪಾಶಾ, ಜಾಕೀರ್ ಕಿಲ್ಲೆದಾರ, ಚಿಕನ್ ಪೀರಾ, ಖತೀಬ್ ಭಾಸುಸಾಬ್, ಮೌಲಾಹುಸೇನ್ ಜಮೇದಾರ್, ಗಪ್ಪರ ಡಿಡಿ, ರಫೀ ಧಾರವಾಡ, ಜಾಫರ್ ಸಂಗಟಿ, ಇಬ್ರಾಹಿಂ ಅಡ್ಡೇವಾಲೆ, ಖಾಜವಲಿ ಬನ್ನಿಕೊಪ್ಪ, ಅಕ್ಬರ್ ಪಲ್ಟನ್, ಗೌಸಾಬ್ ಅಡ್ಮಿಸ್ಟೇಟ್ರ, ಇಸಮೈಲ್ ಸಾಬ್ ಕೊತ್ವಾಲ್, ಅಬುಬಕರ್, ಅಪ್ಸರ್ ಸಾಬ್ ವಕೀಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply