You are here
Home > Koppal News-1 > ಅಂಜುಮನ್ ಕಮೀಟಿ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ ತರಬೇತಿ

ಅಂಜುಮನ್ ಕಮೀಟಿ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ ತರಬೇತಿ

anjuman-committee-koppal anjuman-committee-koppal1
ಕೊಪ್ಪಳ : ನಗರದ ಅಂಜುಮನ್ ಕಮೀಟಿ ವತಿಯಿಂದ ೨೦೧೪-೧೫ನೇ ಸಾಲಿನ ಕಂಪ್ಯೂಟರ್ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಹಾಗೂ ೨೦೧೫-೧೬ ನೇ ಸಾಲಿನಲ್ಲಿ ಕಂಪ್ಯೂಟರ ತರಬೇತಿ ಕಲಿಸುವ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಕಾಟನ್ ಪಾಶಾ ನೆರವೆರಿಸಿದರು. ಈ ಸಂದರ್ಭದಲ್ಲಿ ಕಾಟನ ಪಾಶಾ ಮಾತನಾಡುತ್ತಾ ಪ್ರತಿಯೊಬ್ಬರಿಗೆ ಕಂಪ್ಯೂಟರ್ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಗೂ ಶಿಕ್ಷಣದ ಅತ್ಯಂತ ಅವಶ್ಯಕತೆ ಇದೆ ಅದರಲ್ಲಿ ಸಹ ಕಂಪ್ಯೂಟರ ಶಿಕ್ಷಣದ ಮಹತ್ವ ಅತ್ಯಂತ ಅವಶ್ಯಕತೆ ಇದೆ. ಈ ಸಂಸ್ಥೆಯಿಂದ ಸುಮಾರು ೨ ವರ್ಷಗಳಿಂದ ಈ ಉಚಿತ ಕಂಪ್ಯೂಟರ ಶಿಕ್ಷಣವನ್ನು ನಗರದಲ್ಲಿ ನೆರವೆರರಸುತ್ತಾ ಬಂದಿದೆ ಇದರಲ್ಲಿ ಎಲ್ಲರ ಸಹಕಾರ ಅತ್ಯಂತ ಅಮೂಲ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮೌಲಾಹುಸೇನ್ ಜಮೇದಾರ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಖಾಜಾವಲಿ ಬನ್ನಿಕೊಪ್ಪ, ಮಾನ್ವಿ ಪಾಶಾ, ಹುಸೇನ್ ಪೀರಾ ಚಿಕನ್, ಜಾಫರ ಸಾಬ ಸಂಗಟಿ, ರಫಿ ಧಾವಾಡ, ಅಜೀಜ ಮಾನ್ವಿ, ಕಬೀರ್ ಸಿಂದೋಗಿ, ಬಸೀರ್ ಮೆಕಾನಿಕ್, ಅರಗಂಜಿ ಮೆಬೂಬ, ಅಬೂಬಕರ್, ರಹೇಮಾನ್ ಮಣ್ಣೂರ, ಶಿವು ಪೌಲಿ, ಜಾಫರ ತಟ್ಟಿ, ಯೂಸಫ್ ಇಪ್ಪು, ಸಲೀಂ ಗೊಂಡಬಾಳ, ಸಲೀಂ ಖಾದ್ರಿ, ಸಲೀಂ ನಿರ್ಮಿತಿ, ಹಾಗೂ ಸಂಸ್ಥೆಯ ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Top