ಅಂಜನಾದ್ರಿಬೆಟ್ಟದಲ್ಲಿ ಹನುಮನ ಜಯಂತಿ.

ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟ ಪ್ರಮುಖರ ದರ್ಶನ ಪಡೆಯುವ ಕೇಂದ್ರವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಂಧ (ಹನುಮನಹಳ್ಳಿ) ಐತಿಹಾಸಿಕ ಪ್ರದೇಶವೂ ಹೌದು. ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿ ಬರುವ ಈ ಸ್ಥಳ ತುಂಗಭದ್ರಾ ನದಿ ತಟದಲ್ಲಿರುವ ಧಾರ್ಮಿಕ ಕ್ಷೇತ್ರ.  ಅಂಜನಾದ್ರಿಬೆಟ್ಟ ಹಾಗೂ ಸುತ್ತಲಿನ ಬೆಟ್ಟ ಪ್ರದೇಶ ಕಿಷ್ಕಿಂಧಾ ಪ್ರದೇಶ ಎಂದು ರಾಮಾಯಣ ಸೇರಿದಂತೆ ವೇದ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ. ಪುಂಜಿಕಸ್ಥಳ ಎಂಬ ಅಪ್ಸರೆ ಬೃಹಸ್ಪತಿಯ Untitledಶಾಪದಿಂದ ವಾನರ ಕುಂಜರನ ಮಗಳಾಗಿ ಅಂಜನಾದೇವಿ ಜನಿಸಿ ಕೇಸರಿ ಎನ್ನುವ ವಾನರನ ಜೊತೆ ಮದುವೆಯಾಗಿ ಆಂಜನೇಯನಿಗೆ ಜನ್ಮನೀಡುತ್ತಾಳೆ. ಹನುಮಂತ ಜನಿಸಿದ ಸ್ಥಳ ಎಲ್ಲಿದೆ ಎನ್ನುವ ಕುರಿತು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಹಂಪಿ ಪ್ರದೇಶದ ಕಿಷ್ಕಿಂಧಾ ಪ್ರದೇಶದ ಪರ್ವತಗಳಲ್ಲಿ ಹನುಮ ಜನಿಸಿದ ಎಂದು ಬಹುತೇಕರು ನಂಬುತ್ತಾರೆ. ಅಂಜನಾದ್ರಿ ಬೆಟ್ಟದ ಸುತ್ತ ಋಷಿಮುಖ, ಪಂಪಾಸರೋವರ, ಶಬರಿಗುಹೆ, ವಾಲಿಕಿಲ್ಲಾ, ಮಾಲ್ಯವಂತ, ಮಾತಂಗ ಪರ್ವತ ಸೇರಿ ಅನೇಕ ಸ್ಥಳಗಳು ರಾಮಾಯಣದಲ್ಲಿ ಉಲ್ಲೇಖಿತವಾಗಿವೆ. ಭೌಗೋಳಿಕವಾಗಿ ಇಲ್ಲಿರುವ ಪರ್ವತ ಶ್ರೇಣಿಗಳು ಕಿಷ್ಕಿಂಧಾ ವಾನಜರ ರಾಜ್ಯ ಎನ್ನಲಾಗುತ್ತದೆ.
Please follow and like us:
error