UGC-NET/KSET ಪ್ಲ್ಯಾನರ್ ಸಾಮಾನ್ಯ ಪತ್ರಿಕೆ-೧ ಎಂಬ ಗ್ರಂಥ ಬಿಡುಗಡೆ ಕಾರ್ಯಕ್ರಮ

  ಪರೀಕ್ಷಯ ಪೂರ್ವಸಿದ್ದತೆಯ ಕಾರ್ಯಾಗಾರ ಉಚಿತ ವ್ಯಬ್‌ಸೈಟ್ ಹಾಗೂ

 ಕೊಪ್ಪಳ,ಅ.೧೪,  ನಗರದಲ್ಲಿ ದಿ.೧೨-೧೦-೨೦೧೪ ರ ರವಿವಾರದಂದು  ಪ್ರಗೀತ ಪ್ರಕಾಶನ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಆಶ್ರಯದಲ್ಲಿ ಒಂದು ದಿನದ ಯುಜಿಸಿ ನೆಟ್ ಸೆಟ್ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಕುರಿತು ಕಾರ್ಯಾಗಾg, ಉಚಿತ ವ್ಯಬ್‌ಸೈಟ್ ಹಾಗೂUGC-NET/KSET ಪ್ಲ್ಯಾನರ್ ಸಾಮಾನ್ಯ ಪತ್ರಿಕೆ-೧ ಎಂಬ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯನ್ನು ಗವಿಶಿದ್ದೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೋ. S.ಐ.  ಮಾಲಿಪಾಟೀಲರು ಮಾಡಿ ಕಾರ್ಯಾಗಾರದ ಸದುಪಯೋಗ ಪಡೆಯಲು ಆಕಾಂಕ್ಷಿಗಳಿಗೆ ಕರೆನಿಡಿದರು. ಕಾರ್ಯಾಗಾರದ ಪ್ರಾಸ್ತಾವಿಕ ನುಡಿಗಳನ್ನು ಸಂಪನ್ಮೂಲ ವ್ಯಕ್ತಿ ಪ್ರಕಾಶ ಕೆ. ಬಡಿಗೇರ ಆಡಿದರು. ಲೇಖಕರ ಹಾಗೂ ಪುಸ್ತಕ ಪರಿಚಯವನ್ನು ಶಂಕರ ಕಲ್ಲಿಗನೂರ ವಹಿಸಿದ್ದರು, ಅಥಿತಿಗಳಾಗಿ ಪ್ರೋ. ಬಿ. ಶಾಂತಪ್ಪ; ಡಾ|| ಗಾದೆಪ್ಪ , ಪ್ರೋ ಪ್ರಭುರಾಜ ನಾಯಕ್ ವಿನೋದ ಹೂಲಿ, ಕುಬೇರಪ್ಪ ಬಡಿಗೇರ ಹಾಗು ಆನಂದ ಗೊಂಡಬಾಳ ಉಪಸ್ಥಿತರಿದ್ದರು, ಪ್ರವೀಣ ಹಿರೇಮಠ ಪ್ರಾಥನೆ ಮಾಡಿದರು, ಲಿಂಗರಾಜ ಯತ್ನಳ್ಳಿ ಸ್ವಾಗತಿಸಿದರು, ಖಾದರಭಾಷಾ ಸೊಂಪೂರು ಕಾರ್ಯಕ್ರಮ ನಿರೂಪಿಸಿದರು.
Please follow and like us:
error