ಶಿಕ್ಷಕನಲ್ಲಿ ಎಲ್ಲಾ ಕಲೆಗಳು ಅಡಗಿರಬೇಕು ಆಗ ಮಾತ್ರ ಶಿಕ್ಷಕರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ Teachers

ಸೋಮವಾರ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೦೧೫-೧೬ ನೇ ಸಾಲಿನ ಬಿ.ಇಡಿ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ  ಪ್ರವೀಣ ಎಚ್ ಹಿರೇಮಠ  ಮಾತನಾಡಿ  ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೆ ಆದ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಆ ಪ್ರತಿಭೆಯನ್ನು ವ್ಯಕ್ತಪಡಿಸಲು ಇಂತಹ ಸೂಕ್ತವಾದ ತರಬೇತಿ ಹಂತದ ವೇದಿಕೆಗಳು ಬಹಳ ಅವಶ್ಯಕವಾಗಿರುತ್ತವೆ. ಶಿಕ್ಷಕನೆಂದರೆ ಕಿರಾಣಿ ಅಂಗಡಿ ಇದ್ದಂತೆ ಅದರಲ್ಲಿ ಎಲ್ಲಾ ಸಾಮಗ್ರಿಗಳು ದೊರೆಯುವಂತೆ

ಶಿಕ್ಷಕನಲ್ಲಿ ಎಲ್ಲಾ ಕಲೆಗಳು ಅಡಗಿರಬೇಕು ಆಗ ಮಾತ್ರ ಶಿಕ್ಷಕರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಪ್ರಾಚಾರ್ಯರಾದ   ಪ್ರಕಾಶ.ಕೆ.ಬಡಿಗೇರವರು ಮಾತನಾಡಿ  ವಿದ್ಯಾರ್ಥಿಗಳು ಪ್ರತಿಭೆಯನ್ನು ಕೇವಲ ಕಾಟಾಚಾರಕ್ಕೆ ವ್ಯಕ್ತಪಡಿಸದೆ ಅದು ಒಂದು ಜೀವನದಲ್ಲಿ ಹವ್ಯಾಸವಾಗಿ ಮಾರ್ಪಡಿಕೊಳ್ಳಬೆಂದು ಎಂದು ಹೇಳಿದರು ಡಾ.ಸವಿತಾ ವೀರನಗೌಡ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರುಗಳಾದ ಎ.ಎನ್.ತಳಕಲ್, ಎಲ್.ಎಸ್.ಹೊಸಮನಿ. ಎಸ್.ಎಸ್.ಅರಳಲೇಮಠ, ಜಿ.ಎಸ್.ಸೊಪ್ಪಿಮಠ, ಡಿ.ಎಂ.ಬಡಿಗೇರ. ಎಸ್.ಎಸ್.ಸುಭಾಷಚಂದ್ರಗೌಡ, ಎಂ.ವಿ.ಕಾತರಕಿ, ಡಿ.ಜಿ.ಹೊಸಮನಿ ಹಾಜರಿದ್ದರು. ಶ್ರೀ ಕವಿತಾ ಬೆಣ್ಣಿ ಪ್ರಾರ್ಥಿಸಿದರು. ವಿ.ಆರ್.ಪಾಟೀಲ್ ಸ್ವಾಗತಿಸಿದರು. ಆನಂದರಾವ್ ದೇಸಾಯಿ ನಿರೂಪಿಸಿದರು. ಜೆ.ಎಸ್.ಹಿರೇಮಠ, ವಂದಿಸಿದರು.

Please follow and like us:
error