ಅಪ್ಪ ಟೇಲರ್ ಮಗಳು SSLC Topper

ಪ್ರತಿಭೆಗಳು
ಅರಳುವುದೇ ಗುಡಿಸಿಲಿನಲ್ಲಿ ಎನ್ನುವ ಮಾತಿದೆ.
ಇದು ಯಾವತ್ತೂ ಸತ್ಯ. ಬಡತನದಲ್ಲಿಯೇ ಪ್ರತಿಭೆಗಳು ಅರಳುತ್ತವೆ.  ಇದಕ್ಕೊಂದು ಉದಾಹರಣೆ ಈ ಮಗಳು.
ಅಪ್ಪ ಟೇಲರ್  , ಬಾಡಿಗೆ ಮನೆ, ಶಾಲೆಯ ಪೀಸ್ ಕಟ್ಟಲಾಗದ ಪರಿಸ್ಥಿತಿ ಆದರೂ ಪರಿಶ್ರಮದಿಂದ
ಓದಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿ ಬಡ ತಂದೆ ತಾಯಿಗಳ ಮುಖದಲ್ಲಿ ಸಂತಸದ ನಗು ತಂದಿದ್ದಾಳೆ. ಎಸ್ ಎಸ್ ಎಲ್ ಸಿಯಲ್ಲಿ  97.2 % ಅಂಕಗಳನ್ನು ಪಡೆದಿರುವ ಐಶ್ವರ್ಯಾ
ತಂದೆ,ತಾಯಿಗೆ ಮತ್ತು ಶಾಲೆಗೆ ಊರಿಗೆ ಕೀರ್ತಿ ತಂದಿದ್ದಾಳೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರ ಗ್ರಾಮದ ಪರಶುರಾಮ ಗೊಂದಕರ ಹಾಗೂ ಸಾವಿತ್ರಿ ಗೊಂದಕರರ ಸುಪುತ್ರಿ
ಐಶ್ವರ್ಯಾ ಈ ಸಾಧನೆ  ಮಾಡಿದವಳು.
ಸ್ಥಳೀಯ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿರುವ  ಐಶ್ವರ್ಯಾ ಬಗ್ಗೆ ಶಿಕ್ಷಕರಿಗೂ ಹೆಮ್ಮೆ.
ಗಣಿತದಲ್ಲಿ 100 ಕ್ಕೆ 100 ಅಂಕಗಳು ಕನ್ನಡ 99, ಹಿಂದಿ94, ಇಂಗ್ಲೀಷ್
122, ವಿಜ್ಞಾನ 97,ಸಮಾಜ -95 ಅಂಕಗಳನ್ನು ಪಡೆದಿರುವ ಐಶ್ವರ್ಯಾ ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ.ನಿರಂತರವಾಗಿ ದಿನಕ್ಕೆ 4-5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ,
ನನ್ನ ಸಾಧನೆಗೆ ನನ್ನ ಶಿಕ್ಷಕರು ಮತ್ತು ಪಾಲಕರೇ ಕಾರಣ ಎನ್ನುತ್ತಾಳೆ ಐಶ್ವರ್ಯಾ
 ಮುಂದೆ
ವಿಜ್ಞಾನ ವಿಭಾಗಕ್ಕೆ ಸೇರಬೇಕು
, ಡಾಕ್ಟರ್ ಆಗಬೇಕು ಎನ್ನುವ ಕನಸಿರುವ  ಐಶ್ವರ್ಯಾಗಳಿಗೆ ಶಾಲಾ ಆಡಳಿತ ಮಂಡಳಿ ಬೆನ್ನೆಲುಬಾಗಿ
ನಿಂತಿದೆ. ಮುಂದಿನ ಶಿಕ್ಷಣದ ವೆಚ್ಚ ಆಡಳಿತ ಮಂಡಳಿಯೇ ಭರಿಸಲಿದೆ ಎಂದಿದ್ದಾರೆ
ಸಂಸ್ಥೆಯ ಕಾರ್ಯದರ್ಶಿ ಪ್ರಹ್ಲಾದ ಅಗಳಿ. ಐಶ್ವರ್ಯಾ ಎಲ್ಲ ಬಡ,
ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆಯಾಗಲಿ. 
Please follow and like us:
error