sslc ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಪ್ರಶ್ನೆ ಪತ್ರಿಕೆ ತಯಾರಿ ಕಾರ್ಯಗಾರ

ಕೊಪ್ಪಳ : ತಾಲೂಕಿನ ಪ್ರೌಢಶಾಲಾ ಕನ್ನಡ ವಿಷಯ ಶಿಕ್ಷಕರಿಗೆ ನೀಲ ನಕ್ಷೆ ಆಧಾರಿತ ಪ್ರಶ್ನೆ ಪತ್ರಿಕೆ  ತಯಾರಿ ಕುರಿತ ಕಾರ್ಯಗಾರಿಯನ್ನು ಸ.ಸಂ.ಪ.ಪೂ.ಕಾಲೇಜ  ಕಿನ್ನಾಳದಲ್ಲಿ ಏರ್ಪಡಿಸಲಾಗಿತ್ತು ಕಾರ್ಯಗಾರದ ಅಧ್ಯಕ್ಷತೆಯನ್ನು   ಮನೊಹರ ರಾವ್ ದೇಸಾಯಿ ಎಸ್.ಡಿ.ಎಮ್.ಸಿ.ಅಧ್ಯಕ್ಷರು ವಹಿಸಿದ್ದರು,   ಖಾಸಿಂ ಸಾಬ್ ಮುಖ್ಯೋಪಾಧ್ಯಯರು ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ಶಾಲೆ ಕೊಪ್ಪಳ ಇವರು ಉದ್ಘಾಟಿಸಿದರು ಪ್ರಾಸ್ತವಿಕವಾಗಿ ಶ್ರೀ ಸೋಮಶೇಖರ.ಚ. ಹರ್ತಿ  ಮಾತನಾಡಿ  ೧೦ ನೇ ತರಗತಿ ಪರಿಕ್ಷಾ ಫಲಿತಾಂಸ ಸುಧಾರಣೆಗೆ  ಈ ಕಾರ್ಯಗಾರ ಬುನಾಧಿಯಾಗಲಿದೆ  ಶೈಕ್ಷಣಿಕ ಗುರಿಗಳು  ಕಲಿಕೆಯ ಅನುಭವಗಳು ಮತ್ತು ಮೌಲ್ಯ ಮಾಪನ ಉತ್ತಮ ಶಿಕ್ಷಣದ  ಅವಿಭಾಜ್ಯದ ಅಂಗಗಳಾಗಿವೆ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗಾಗಿ  ೨೦೧೧-೨೦೧೨ ರಲ್ಲಿ ಹಾಕಿಕೊಂಡ ಕಾರ್ಯಕ್ರಮಗಳ ಕುರಿತು ತಿಳಿಸಿದರು.   ಎಮ್.ಎಸ್.ಬಡದಾನಿ ಜಿಲ್ಲಾ ವಿಷಯ ಪರಿವಿಕ್ಷಕರು ಮಾತನಾಡಿ  ಎಲ್ಲಾ ಶಿಕ್ಷರು ಪ್ರಶ್ನೆ ಪತ್ರಿಕೆ ತಯಾರಿಸುವ  ಕೌಶಲ್ಯ ಬೆಳಿಸಿಕೊಳ್ಳಲ್ಲು ಕರೆನಿಡಿದರು.  ದೇವಪ್ಪ ಬಚ್ಚಕನವರ್, ಶ್ರೀ ಪ್ರಭು ವಸ್ರ್ತದ ಸಂಪನ್ಮೂಲ ವ್ಯಕ್ತಿಗಳಾಗಿ ತರಬೆತಿ ನೀಡಿದರು ಶ್ರೀಮತಿ ಮಾಲಾ ಪತ್ತಾರ ಮುಖ್ಯೋಪಾದ್ಯಾಯನಿ ಪ್ರೌಡಶಾಲೆ ಕಿನ್ನಾಳ  ಶಾಂತಯ್ಯ ಗುರುವಿನ ಮುಖ್ಯೋಪಾಧ್ಯಾಯರು ಕಾಳಿದಾಸ ಪ್ರೌಢಶಾಲೆ ಕೊಪ್ಪಳ ಉಪಸ್ಥಿತರಿದ್ದರು ರೇವಣ ಸಿದ್ದಪ್ಪ ಚನ್ನಿನಾಯಕರ ಕಾರ್ಯಕ್ರಮವನ್ನು ನಿರೂಪಿಸಿದರು   ಮಂಜುನಾಥ ಕಟ್ಟಿ ವಂದಿಸಿದರು ಎಲ್ಲಾ ವಿಷಯಗಳ ಕಾರ್ಯಗಾರಗಳನ್ನು ಶಿಕ್ಷನ ಇಲಾಖೆ ಹಮ್ಮಿಕೊಂಡಿದೆ

Leave a Reply