SSLC ಪರೀಕ್ಷಾ ಕೆಂದ್ರಗಳ ನಿಗದಿ

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು = 63 ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳು ಮತ್ತು 17 – ಉಪ ಪರೀಕ್ಷಾ ಕೇಂದ್ರಗಳು ಹಾಗೂ 110 – ವಸತಿ ನಿಲಯಗಳನ್ನು ನಿಗದಿ ಮಾಡಲಾಗಿದೆಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ -19 ಪ್ರಕರಣವನ್ನು ತಡೆಗಟ್ಟಲು ಒಟ್ಟು -45 ವಸತಿ ನಿಲಯಗಳನ್ನು ಹಾಗೂ ಶಾಲೆಗಳನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿತ್ತು , ಕೆಲವು ಕೇಂದ್ರಗಳಲ್ಲಿ ದೇಶದ ಬೇರೆ ಬೇರೆ ರಾಜ್ಯ ಮತ್ತು ಬೇರೆ ಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರು , ವಿದ್ಯಾರ್ಥಿಗಳು , ಯಾತ್ರಿಗಳು , ಪ್ರವಾಸಿಗರು ಮುಂತಾದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು . ಪ್ರಸ್ತುತ ರಾಜ್ಯ ಸರ್ಕಾರವು ಇದೇ ತಿಂಗಳ ದಿನಾಂಕ : 25-06-2020 ರಿಂದ 04-07-2020 ರವರೆಗೆ ಎಸ್.ಎಸ್.ಎಲ್ . ಪರೀಕ್ಷೆಯನ್ನು ನಿಗದಿಪಡಿಸಿರುತ್ತದೆ . ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು -63 ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳು ಮತ್ತು 17 – ಉಪ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದ್ದು , ಈ ಪರೀಕ್ಷಾ ಕೇಂದ್ರಗಳನ್ನು ಹತ್ತಿರದ ವಿವಿಧ ಇಲಾಖೆಯ ನೀಲಯಗಳೊಂ t ಮ್ಯಾಪಿಂಗ್ ಮಾಡಲಾಗಿದ್ದು , ಒಟ್ಟು -10 ವಸತಿ ನಿಲಯಗಳನ್ನು ಗುರ್ತಿಸಿ ನಿಗದಿಪಡಿಸಲಾಗಿದೆ . ಮಕ್ಕಳ ಆರೋಗ್ಯದ – ಹಿತದೃಷ್ಟಿಯಿಂದ ಈ ಹಿಂದೆ ಅಥವಾ ಪ್ರಸ್ತುತ ಕ್ವಾರಂಟೈನ್ ಮಾಡಿದ್ದ ವಸತಿ ನಿಲಯಗಳನ್ನು ಶಾಲೆಗಳನ್ನು ಪರೀಕ್ಷಾ ಕೇಂದ್ರದ ಅಥವಾ ವಸತಿ ಉದ್ದೇಶಕ್ಕಾಗಿ ಬಳಸಿಕೊಂಡಿರುವುದಿಲ್ಲ . ಹಾಗಾಗಿ ಪಾಲಕರು / ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ನಿರ್ಭಯವಾಗಿ ಪರೀಕ್ಷೆಗೆ ಹಾಜರಾಗಬಹುದಾಗಿದೆ . ಆದ್ದರಿಂದ ವಸತಿ ನಿಲಯದಲ್ಲಿದ್ದು , ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಅವರು ಈ ಹಿಂದೆ ದಾಖಲಾಗಿದ್ದ ವಸತಿ ನಿಲಯ ವಾರ್ಡನ್‌ಗಳನ್ನು ಸಂಪರ್ಕಿಸಿ ಪರಿಷ್ಕೃತಗೊಂಡಿರುವ ವಸತಿ ನಿಲಯಗಳ ವಿವರವನ್ನು ಪಡೆಯಲು ಸೂಚಿಸಿದೆ . ಅಲ್ಲದೇ ಆಯಾ ವಸತಿ ನಿಲಯಗಳಿಂದ ದೂರದ ಪರೀಕ್ಷಾ ಕೇಂದ್ರಗಳಿಗೆ ವಾಹನದ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ . ಈ ಕುರಿತು ಯಾವುದೇ ಗೊಂದಲಗಳಿದ್ದರೆ ಜಿಲ್ಲಾ ಸಹಾಯವಾಣಿ ದೂರವಾಣಿ ಸಂಖ್ಯೆ : 08539-225001 ಅಥವಾ ಈ ಕೆಳಕಾಣಿಸಿದ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದೆ . ಉಪನಿರ್ದೇಶಕರ ಕಛೇರಿಯ ಅಧಿಕಾರಿಗಳು :

1 ) ಸುಭಾಶ ಮೊ . ನಂ .9448973573 2 ) ನೀಲಕಂಠಪ್ಪ ದೂ , ನಂ .9483698135 ಕ್ಷೇತ್ರ ಶಿಕ್ಷಣಾಧಿಕಾರಿಗಳು 1 ) ಗಂಗಾವತಿ – 9480695275 2 ) ಕೊಪ್ಪಳ – 9480695279 3 ) ಕುಷ್ಟಗಿ -9480695280 4 ) ಯಲಬುರ್ಗಾ 9480695281

Please follow and like us:
error