Sfi ನಿಂದ KSRTC ಮುಖ್ಯ ಕಚೇರಿಗೆ ಮುತ್ತಿಗೆ

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಜೂನ್ ಮತ್ತು ಜುಲೈ 2017 ರಂದು SFI ವ್ಯಾಪಕ ಪ್ರತಿಭಟನೆ ನಡೆಸಿತ್ತು. ನಮ್ಮ ಹೋರಾಟದ ಭಾಗವಾಗಿ ಹಿಂದಿನ ಕಾಂಗ್ರೆಸ್ ಸರಕಾರ ಬಜೆಟ್ ನಲ್ಲಿ ಉನ್ನತ ಶಿಕ್ಷಣದ ವರೆಗೆ ಉಚಿತ ಬಸ್ ಘೋಷಿಸಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) 17.04.2018 ರಂದು ಸಭೆ ನಡೆಸಿ ಸಭೆಯ ನಡಾವಳಿಯನ್ನು ಆರ್ಥಿಕ ಇಲಾಖೆಗೆ ಉಚಿತ ಬಸ್ ಕುರಿತು ಪತ್ರವನ್ನು ಬರೆದಿತ್ತು. ಆದರೆ ಸಮ್ಮಿಶ್ರ ಸರಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ.

ಹಾಗಾಗಿ ಸಮ್ಮಿಶ್ರ ಸರಕಾರದ ಕ್ರಮ ವಿರೋಧಿಸಿ ಹಾಗೂ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಬುದುವಾರದಿಂದಲೇ ತಾಲ್ಲೂಕ ಮಟ್ಟದಲ್ಲಿ SFI ಹೋರಾಟ ನಡೆಸುತ್ತಿದೆ. ಸರಕಾರ ಇಲ್ಲಿಯವರೆಗೆ ಸ್ಪಂದಿಸುವ ಪ್ರಯತ್ನ ನಡೆಸಲಿಲ್ಲ. ಸಮ್ಮಿಶ್ರ ಸರಕಾರದ ಈ ವಿದ್ಯಾರ್ಥಿ ವಿರೋಧಿ ನೀತಿ ವಿರೋಧಿಸಿ *ಜೂನ್ 15 ರಂದು* ಶಾಂತಿನಗರದಲ್ಲಿರುವ *KSRTC ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು* ಎಂದು SFI ರಾಜ್ಯಾಧ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: