You are here
Home > Koppal News > Rank ಸ್ಟುಡೆಂಟ್ ಸೆಕ್ಯೂರಿಟಿ ಗಾರ್ಡ

Rank ಸ್ಟುಡೆಂಟ್ ಸೆಕ್ಯೂರಿಟಿ ಗಾರ್ಡ

ಕಡು ಬಡತನದಲ್ಲಿ ಹುಟ್ಟಿಬೆಳೆದಾತ, ಓದುವ ಹಂಬಲದಿಂದ ತನ್ನ ಶಿಕ್ಷಣದ ಖರ್ಚಿಗಾಗಿ ಎಟಿಎಮ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಸೆಕ್ಯೂರಿಟಿ ಕೆಲಸ ಮಾಡುತ್ತಲೇ ಈ ವಿದ್ಯಾರ್ಥಿ ಸಾಧನೆಯ ಮೈಲುಗಲ್ಲು ಹತ್ತಿದ್ದಾನೆ. ಎಂಎ ಕನ್ನಡ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಫಸ್ಟ್ ರ್ಯಾಂಕ್ ಆಗುವುದರ ಮೂಲಕ ಎಲ್ಲ ಗಮನ ಸೆಳೆದಿದ್ದಾನೆ.

ಹೀಗೆ ಎಟಿಎಂ ಮುಂದೆ ಕಾವಲುಗಾರನಾಗಿ ನಿಂತಿರುವ ಈತನ ಹೆಸರು ರಮೇಶ ಛಲವಾದಿ ಅಂತ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ನಿವಾಸಿ. ಕಡುಬಡತನದಲ್ಲಿ ಹುಟ್ಟಿದ ರಮೇಶನಿಗೆ ಓದುವ ಹಂಬಲ ಜಾಸ್ತಿ, ಇತ್ತ ಮನೆಯಲ್ಲಿ ಕಿತ್ತುತಿನ್ನುವ ಬಡತನ, ಮನೆಯ ಹಿರಿತನ ಮಾಡಬೇಕಾದ ತಂದೆಗೆ ಅದೊಂದು ದಿನ ಆ್ಯಕ್ಸಿಡೆಂಟ್ ಆಗಿತ್ತು. ಅಂದಿನಿಂದ ಮದ್ಯವ್ಯಸನಿಯಾಗಿದ್ದ, ಮನೆಯ ಜವಾಬ್ದಾರಿಯಲ್ಲ ಇದೇ ರಮೇಶನ ಹೆಗಲಿಗೆ ಬಂದಿತ್ತು. ಮನೆಯ ಖರ್ಚುವೆಚ್ಚ ಹಾಗೂ ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ಹಗಲಿರುಳು ಶ್ರಮಿಸಿದ. ಅವರಿವರ ಸಹಾಯದಿಂದ ನಸು ಬೆಳಕಿನಲ್ಲಿ ಮನೆ ಮನೆಗೆ ತೆರಳಿ ನ್ಯೂಸ್ ಪೇಪರ್ ಹಂಚುತಿದ್ದ. ಜೊತೆ ಜೊತೆಗೆ ಹಾಲು ಮಾರುತ್ತಿದ್ದ. ಹೀಗೆ ಮಾಡುತ್ತ ಅದೊಂದು ದಿನ ಬ್ಯಾಂಕ್ ಸೆಕ್ಯೂರಿಟಿಯಾಗಿ ಸೇರಿಕೊಂಡ.

ಹಾಸ್ಟೇಲ್ನಲ್ಲಿ ಇದ್ದುಕೊಂಡು ರಾತ್ರಿ ಬ್ಯಾಂಕ್ ಎಟಿಎಂ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಹೋಗುತ್ತಿದ್ದ, ಹಾಗೇ ಬರೀ ಕೈಯಲ್ಲಿ ಹೋಗದೆ ಈತ ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ಬರುತ್ತಿದ್ದ. ಪ್ರತಿದಿನ ನಾಲ್ಕೈದು ತಾಸು ಓದುತ್ತಿದ್ದ. ಹೀಗೆ ಓದುತ್ತ, ಕಾವಲುಕೆಲಸ ಮಾಡುತ್ತಲೇ ತನ್ನ ವಿದ್ಯಾಭ್ಯಾಸ ಮುಂದುವರಿಸಿದ್ದಾನೆ. ಪಿಯುಸಿ ಯಿಂದ ಬಿಇಡಿ ಮುಗಿಸಿ ಗಂಗಾವತಿಯ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಂ ಎ ಕನ್ನಡ ವಿಭಾಗದಲ್ಲಿ ಓದುತ್ತಿದ್ದ ಓದಿನಲ್ಲಿ ಎಂದು ಹಿಂದೇ ಬೀಳದೆ, ಪದವಿಯಲ್ಲಿ ಮೂರುವರ್ಷ ಕೂಡ ಪ್ರಥಮ ಸ್ಥಾನದಲ್ಲಿದ್ದ. ಇದೀಗ ಸ್ನಾತಕೋತ್ತರದಲ್ಲಿಯು ಬಳ್ಳಾರಿ ವಿಶ್ವವಿದ್ಯಾಲಯದಕ್ಕೆ ಫಸ್ಟ್ ರ್ಯಾಂಕ್ ಬಂದಿದ್ದಾನೆ.

ಇನ್ನು ಈ ರ್ಯಾಂಕ ಸ್ಟೂಡೆಂಟ್ ರಮೇಶ ಶಿಕ್ಷಕನಾಗಿ ಎಲ್ಲಿಯಾದ್ರು ಕೆಲಸಕ್ಕೆ ಹೋಗಬಹುದಿತ್ತು. ಆದ್ರೆ ಇನ್ನು ಓದುವ ಹಂಬಲದಿಂದ ಈಗಲು ಸಹ ಫಸ್ಟ್ ರ್ಯಾಕ್ ಆದ್ರು ಸಿಂಡಿಕೇಟ್ ಬ್ಯಾಂಕ್ ಎಟಿಎಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಕೆಲಸ ಮಾಡುವುದಕ್ಕೆ ನನಗೆ ಯಾವುದೇ ಮುಜುಗರ ಇಲ್ಲ. ನನ್ನ ಮನೆಯ ಖರ್ಚುವೆಚ್ಚ ಹಾಗೂ ನನ್ನ ಓದಿನ ಖರ್ಚುವೆಚ್ಚ ನೋಡುವುದಕ್ಕಾಗಿ ನಾನು ಈ ಕೆಲಸ ಮಾಡುತ್ತೇನೆ. ಇಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಸ್ಟಡಿ ಮಾಡಲು ಅನುಕೂಲವಾಗಿದೆ. ನನಗೆ ಬ್ಯಾಂಕ್ ನವರು ಮತ್ತು ನನ್ನ ಕಾಲೇಜಿನ ಗುರುಗಳು ತುಂಬಾನೆ ಸಫೋರ್ಟ್ ಮಾಡುತ್ತಿದ್ದಾರೆ ಅಂತಾನೇ ರಮೇಶ.

ಅದೆಷ್ಟೋ ಪೋಷಕರು ಮಕ್ಕಳನ್ನ ಚನ್ನಾಗಿ ಓದಿಸಬೇಕು ಅಂದ್ರೆ ಕೆಲವರು ಓದುವುದರಲ್ಲಿ ಆಸಕ್ತಿ ತೋರೋದಿಲ್ಲ. ಕೆಲಸವರು ಓದುವ ಹಂಬಲ ಇದ್ರೆ ಆರ್ಥಿಕ ಸಂಕಷ್ಟ. ಇವೆಲ್ಲದರ ನಡುವೆ ಆರ್ಥಿಕ ಸಂಕಷ್ಟ ಮೆಟ್ಟಿನಿಂತು ಶಿಕ್ಷಣದಿಂದ ವಂಚಿತನಾಗದೆ ತನ್ನ ಸ್ವಂತ ದುಡುಮೆಯಿಂದ ಓದಿ ಇಡೀ ವಿಶ್ವವಿದ್ಯಾಲಯ ಅಷ್ಟೆ ಅಲ್ಲದೆ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾನೆ. ಇಂತಹ ಬಡ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ, ಮತ್ತು ಸ್ಥಳಿಯ ಜನಪ್ರತಿನಿಧಿಗಳು ಮುಂದಾಗಬೇಕಿದೆ.

Top