ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಸಮರ್ಪಕ ವಿತರಣೆಗೆ ಕ್ರಮ

ಕೊಪ್ಪಳ ಸೆ. ೦೨ (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳಲ್ಲಿ ಒಟ್ಟು ೨೧೭೪ ಟನ್ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ಇರಿಸಲಾಗಿದ್ದು, ಸಹಕಾರ ಸಂಘಗಳ ಮೂಲಕ ರೈತರಿಗೆ ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ.

  ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರಗಳು ಸೇರಿದಂತೆ ಇತರೆ ಸಹಕಾರ ಸಂಘಗಳು ಹಾಗೂ ದಾಸ್ತಾನು ಇರಿಸಲಾಗಿರುವ ಯೂರಿಯಾ ಗೊಬ್ಬರದ ಪ್ರಮಾಣದ ವಿವರ (ಟನ್ ಗಳಲ್ಲಿ) ಇಂತಿದೆ.  
  ಕೊಪ್ಪಳ ತಾಲೂಕು :  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಿಟ್ನಾಳ- ೫೧ ಟನ್, ಮುನಿರಾಬಾದ್-೫೧, ಶಿವಪುರ-೫೧, ಅಗಳಕೇರಾ-೫೧, ಬಂಡಿಹರ್ಲಾಪುರ-೫೧, ಹಿರೇಬಗನಾಳ-೩೪, ಗಿಣಿಗೇರಾ-೧೭, ಮುದ್ದಾಬಳ್ಳಿ-೨೪, ಇರಕಲ್ಲಗಡಾ-೧೭, ಕಿನ್ನಾಳ-೫೧, ಹೊಸಳ್ಳಿ- ೫೧, ಅಳವಂಡಿ-೧೭, ಬೆಟಗೇರಾ- ೧೭, ಕವಲೂರು-೧೭, ಗಟ್ಟರೆಡ್ಡಿಹಾಳ- ೧೭, ಹಿರೇಸಿಂದೋಗಿ- ೧೭, ಬಿಸರಳ್ಳಿ- ೧೭, ಕೊಪ್ಪಳ- ೧೭, ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘ, ಮುದ್ದಾಬಳ್ಳಿ- ೧೭ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರ, ಕೊಪ್ಪಳ- ೬೦ ಟನ್ ದಾಸ್ತಾನಿರಿಸಲಾಗಿದೆ.
  ಕುಷ್ಟಗಿ ತಾಲೂಕು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹನುಮನಾಳ- ೧೭ ಟನ್, ನಿಲೋಗಲ್- ೧೦, ಮಾಲಗಿತ್ತಿ-೧೦೧, ಮಾದಾಪುರ-೧೦, ತಾವರಗೇರಾ-೧೦, ಮೆಣೆದಾಳ- ೧೫, ಎರಿಗೋನಾಳ- ೧೫, ಕಳಮಳ್ಳಿ- ೧೦, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರ, ಕುಷ್ಟಗಿ- ೨೦, ಕೃಷಿ ಸಂಸ್ಕರಣಾ ಸಹಕಾರಿ ಸಂಘ, ನಿಯಮಿತ, ಕುಷ್ಟಗಿ-೧೭ ಟನ್.
  ಯಲಬುರ್ಗಾ ತಾಲೂಕು:  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಸಬಹಂಚಿನಾಳ- ೩೪ ಟನ್, ಕುಕನೂರು-೩೪, ಇಟಗಿ- ೧೦, ತಾಳಕೇರಿ- ೧೦, ಮಂಡಲಗೇರಿ- ೧೦, ಚಿಕ್ಕೇನಕೊಪ್ಪ- ೧೦, ಬನ್ನಿಕೊಪ್ಪ- ೧೦, ವಜ್ರಬಂಡಿ- ೧೦, ಯಲಬುರ್ಗಾ- ೧೦, ಮುಧೋಳ- ೧೦, ಬೇವೂರ- ೧೦, ಬಂಡಿ- ೧೦, ಮಂಗಳೂರು- ೧೦ ಮತ್ತು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರ, ಯಲಬುರ್ಗಾ- ೫೧ ಟನ್.
  ಗಂಗಾವತಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಸಾಪಟ್ಟಣ- ೫೧ ಟನ್, ಬೆನ್ನೂರು- ೫೧, ಚೆಳ್ಳೂರು-೫೧, ಢಣಾಪುರ- ೫೧, ಗಂಗಾವತಿ- ೬೮, ಗುಂಡೂರು- ೫೧, ಹೊಸಕೇರಾ- ೫೧, ಕೇಸರಹಟ್ಟಿ- ೫೧, ಮರಳಿ- ೫೧, ಮರ್‍ಲಾನಹಳ್ಳಿ- ೫೧, ಸಿದ್ದಾಪುರ- ೫೧, ಮುಸ್ಟೂರ- ೫೧, ಶ್ರೀರಾಮನಗರ- ೫೧, ಕನಕಗಿರಿ- ೧೭, ಆನೆಗುಂದಿ- ೩೪, ಕಾರಟಗಿ- ೫೧, ಜಿರಾಳ- ೩೪, ಸಿಂಗನಾಳ- ೩೪, ಹಣವಾಳ- ೫೧, ಮಲ್ಲಾಪುರ- ೩೪, ಬೂದಗುಂಪಾ- ೫೧, ಚಿಕ್ಕಜಂತಕಲ್- ೫೧, ಯರಡೋಣಾ-೫೧ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟಕೇಂದ್ರ, ಗಂಗಾವತಿಯಲ್ಲಿ ೬೮ ಟನ್ ಯೂರಿಯಾ ದಾಸ್ತಾನಿರಿಸಲಾಗಿದೆ.
  ರೈತರು ತಮ್ಮ ಗುರುತಿನ ಚೀಟಿ ತೋರಿಸಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಸಂಘದಲ್ಲಿ ಯೂರಿಯಾ ರಸಗೊಬ್ಬರವನ್ನು ಪಡೆಯಬಹುದಾಗಿದೆ.  ಹೆಚ್ಚಿನ ವಿವರಗಳಿಗೆ ಸಮೀಪಕದ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರು/ ತಾಲೂಕು ಕೃಷಿ ನಿರ್ದೇಶಕರು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error