ಚುನಾವಣೆ : ಮತಯಂತ್ರದಲ್ಲಿ ’ನೋಟಾ’ ಆಯ್ಕೆಗೂ ಅವಕಾಶ

 ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರನಿಗೆ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಇಚ್ಛೆ ಇಲ್ಲದಿದ್ದಲ್ಲಿ, ವಿದ್ಯುನ್ಮಾನ ಮತಯಂತ್ರದಲ್ಲಿ ’ನೋಟಾ’ (None of the Above) ಅಂದರೆ ಕನ್ನಡದಲ್ಲಿ ’ಮೇಲ್ಕಂಡ ಯಾರೂ ಅಲ್ಲ’ (ಮೇ ಯಾ ಅ) ಎನ್ನುವುದನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
  ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸುವ ಇಚ್ಛೆ ಇಲ್ಲದಿದ್ದಲ್ಲಿ, ವಿದ್ಯುನ್ಮಾನ ಮತಯಂತ್ರದಲ್ಲಿ ’ನೋಟಾ’ ಅಥವಾ ’ಮೇ ಯಾ ಅ’ ಎನ್ನುವುದಕ್ಕೆ ಮತದಾರ ತನ್ನ ಮತ ಚಲಾಯಿಸಲು ಅವಕಾಶವನ್ನು ಈ ಬಾರಿ ಚುನಾವಣಾ ಆಯೋಗ ಕಲ್ಪಿಸಿದೆ.

Leave a Reply