ಉದ್ಯೋಗಕ್ಕಾಗಿ ಯುವಜನರು ಎಂಬ ಅಭಿಯಾನದ ಮೂಲಕ ಬರುವ ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆಗೆ ಮುನ್ನವೇ ೧೦ ಲಕ್ಷ ಉದ್ಯೋಗಾವಕಾಶ ಕಲ್ಪಿ ಸಬೆಕು ಎಂದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಇಂದು
ಕೊಪ್ಪಳ ಜಿಲ್ಲೆಯಲ್ಲಿ ಆರಂಭವಾಗಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹಿ ಮಾಡುವದರ ಮೂಲಕ ತಮಗೂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಈ ಅಭಿಯಾನದ ಮೂಲಕ ಸರ್ಕಾರಿ ನೌಕರಿಯೇ ಕೊಡಬೇಕು ಎಂದೆನಿಲ್ಲ ಸಾಲ ನೀಡುವ ಮೂಲಕ ಉದ್ಯೊಗ ಸೃಷ್ಠ ಮಾಡಬೇಕು. ಯಾವ ಪಕ್ಷ ಉದ್ಯೋಗ ನೀಡುತ್ತದೆ ಅದಕ್ಕೆ ಮಾತ್ರ ನಾವು ಓಟ್ ಹಾಕುತ್ತೇವೆ. ಕರ್ನಾಟಕದಲ್ಲಿ ೨ ಕೋಟಿ ೩೪ ಲಕ್ಷ ಜನ ಓಟು ಹಾಕುವ ಪವರ್ ಇರುವ ಹೊಂದಿದ ನಿರುದ್ಯೋಗಿಗಳಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆಯ ಮುನ್ನವೇ ೧೦ ಲಕ್ಷ ಉದ್ಯೋಗಾವಕಾಶ ನೀಡಬೇಕು, ೨೦೧೩ ರ ಸರ್ವೇ ಪ್ರಕಾರ ೯೫ ಲಕ್ಷ ಜನ ನಿರುದ್ಯೋಗಿಗಳಿದ್ದಾರೆ ೨೦೧೭ ಕ್ಕೆ ಹೋಲಿಸಿದರೆ ಅದು ಇನ್ನು ಹೆಚ್ಚಿಗೆ ಆಗಿರುತ್ತದೆ, ಆದರೆ ಚುನಾವಣಾ ಸಂದರ್ಬದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ೫೦ ಲಕ್ಷ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಭರವಸೆ ನಿಡುತ್ತಾರೆ, ಅದು ಕೇವಲ ಭರವಸೆಯಾಗಿ ಉಳಿಯತ್ತೆ ಆದರೆ ಈ ಬಾರಿ ಹಾಗೆ ಆಗಲ್ಲ ಚುನಾವಣೆಗೆ ಮುನ್ನವೇ ೧೦ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡದಿದ್ದರೆ ಅವರಿಗೆ ಓಟನ್ನು ಹಾಕುವದಿಲ್ಲ. ಈ ಕುರಿತು ಪೆಬ್ರುವರಿ ೪ ರಂದು ಬೆಂಗಳೂರಿನಲ್ಲಿ ಯೂತ್ ಅಸೆಂಬ್ಲಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನಿಡಲಾಗುವದು ಎಂದರು.