fbpx

ಹೊಸ ಕಲಿಕಾ ಅನುಜ್ಞಾ ಅರ್ಜಿ LLR : ಆನ್‌ಲೈನ್ ಮೂಲಕ ಸಲ್ಲಿಸಲು ಸೂಚನೆ

ಕೊಪ್ಪಳ ಪ್ರಾದೇಶಿಕ ಕಚೇರಿಯಲ್ಲಿ ಹೊಸದಾಗಿ ಕಲಿಕಾ ಅನುಜ್ಞಾ, ಚಾಲನಾ ಅನುಜ್ಞಾ ಹಾಗೂ ನೋಂದಣಿಯ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸುವಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

  ಕಲಿಕಾ ಅನುಜ್ಞಾ, ಚಾಲನಾ ಅನುಜ್ಞಾ ಹಾಗೂ ನೋಂದಣಿಯ ಅರ್ಜಿಗಳನ್ನು ಮಾ.೦೧ ರಿಂದ ಪ್ರಾಯೋಗಿಕವಾಗಿ ಹಾಗೂ ಮಾ.೧೫ ರಿಂದ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರ ಸ್ವೀಕರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಹೋಬಳಿ ಹಾಗೂ ಗ್ರಾಮಗಳಲ್ಲಿನ ಎಲ್ಲಾ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆಯ ವೆಬ್‌ಸೈಟ್ www.rto.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.  
Please follow and like us:
error

Leave a Reply

error: Content is protected !!