You are here
Home > Koppal News > KPL ಕ್ರಿಕೆಟ್‌ ಟೂರ್ನಮೆಂಟ್ ಉದ್ಘಾಟನೆ

KPL ಕ್ರಿಕೆಟ್‌ ಟೂರ್ನಮೆಂಟ್ ಉದ್ಘಾಟನೆ

Koppal ಕೊಪ್ಪಳ ನಗರದಲ್ಲಿ ಇಂದು ನಡೆದ ಐಪಿಎಲ್ ಮಾದರಿಯಲ್ಲಿ ಕೆಪಿಎಲ್ ಕ್ರಿಕೆಟ್‌ ಟೂರ್ನಮೆಂಟ್ ಪಂದ್ಯದ ಉದ್ಘಾಟನೆಯನ್ನ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾಡಿದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಸದಸ್ಯರಾದ ಗವಿಸಿದ್ದಪ್ಪ ಕರಡಿ ಆಗಮಿಸಿದ್ದರು ವೇದಿಕೆಯಲ್ಲಿ ಗುರುರಾಜ ಹಲಗೇರಿ ನಗರಸಭೆ ಸದಸ್ಯರು, ಅಮ್ಜದ್ ಪಟೇಲ್ ನಗರ ಸಭೆ ಸದಸ್ಯರು, ನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಶಿವಾನಂದ ವಾಲಿಕಾರ, ಹಿರಿಯ ಆಟಗಾರರಾದ ಸಿದ್ದಪ್ಪ ಪಾಟೀಲ,ವೆಲ್ಫೇರ್ ಪಾರ್ಟಿಯ ಅದ್ಯಕ್ಷ ರಾದ ಆದಿಲ್ ಪಟೇಲ್, ಖುಷಿ ಆಸ್ಪತ್ರೆಯ ನಿರ್ದೇಶಕರಾದ ಮಹೇಂದ್ರ ಕಿಂದ್ರೆ,ಪ್ರಗತಿ ಪಥ ಪತ್ತಿನ ಸಹಕಾರ ಸೌಹಾರ್ದ ನಿಯಮಿತದ ನಿರ್ದೇಶಕರಾದ ಸತೀಶ್ ಮಂಗಳೂರು,ಬಾಬಾ ಅರಗಂಜಿ,ಸಾಯಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞರಾದ ಡಾ.ಅಜಯ್ ಬಾಚಲಾಪೂರ ಹಿರಿಯ ಆಟಗಾರರು ಹಾಗೂ ನಗರಸಭೆ ಸದಸ್ಯರಾದ ಶಅಕ್ಬರ್‌ ಪಲ್ಟನ್ ದೌಲತ್ ಸಿಕ್ಕಲಗಾರ ,ನನ್ಯಾಸಾಬ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿದ್ಯವನ್ನ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ವಹಿಸಿದ್ದರು.
ಎಂಟೂ ತಂಡದ ಮಾಲೀಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉದ್ಘಾಟನಾ ಪಂದ್ಯವನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘ-೧೧ ವರ್ಸಸ್ ಪೋಲಿಸ್-೧೧ ತಂಡಗಳ ನಡುವೆ ಏರ್ಪಡಿಸಲಾಗಿತ್ತು ಮೊದಲ ಬ್ಯಾಟ ಮಾಡಿದ ಪೋಲಿಸ್ ತಂಡ ನಾಲ್ಕು ಹುದ್ದರಿ ನಷ್ಟಕ್ಕೆ ೯೩ರನ್ನ ಗಳಿಸಿತ್ತು ಅದರ ಉತ್ತರವಾಗಿ ವಕೀಲರ ಸಂಘ ೮ಹುದ್ದರಿ ಕಳೆದುಕೊಂಡ ಕೇವಲ ೬೪ ರನ್ನಗಳಿಗೆ ಪತನವಾಯಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪೋಲಿಸ್ ತಂಡದ ಮಂಜುನಾಥ ಪಡೆದರು.
ವಿಜೆತರಿಗೆ ಸಸಿ ನೀಡುವ ಮೂಲಕ ಆಯೊಜಕರಾದ ಮೈನುದ್ದೀನ್ ವರ್ದಿ ಪರಿಸರ ಕಾಳಜಿಯನ್ನು ಮೆರೆದರು.

Top