ಕಬ್ಬಡ್ಡಿ ವಿಜೇತರಿಗೆ ಪ್ರಶಸ್ತಿ ವಿತರಣೆ


ಕೊಪ್ಪಳ: ಜ. 24, ಗವಿಸಿದ್ದೇಶ್ವರ ಜಾತ್ರೆಯಲ್ಲಿ ಯುವ ಸಬಲೀಕರಣ ಮತ್ತು ಕೊಪ್ಪಳ ಜಿಲ್ಲಾ ಅಥ್ಲೇಟಿಕ ಅಸೋಷಿಯೇಶನ್ (ರಿ) ಇವರುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಗಳು ಜರುಗಿದವು.
ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜ ಪ್ರಥಮ, ಹುನಗುಂದದ ವಿಜಯ ಮಹಾಂತೇಶ್ವರ ದ್ವೀತಿಯ ಸ್ಥಾನ, ಹಾಗೂ ಗಂಗಾವತಿಯ ಆರಾಳು ಶಿವಮೂತೇಶ್ವರ ತೃತೀಯ, ಕುಷ್ಠಗಿ ಚಳಗೇರಿಯ ಬಿ ಸಿ ರಮೇಶ ಆಕಾಡಮಿ ಚತುರ್ಥಿ ಸ್ಥಾನವನ್ನು ಪಡೆದುಕೋಂಡಿದ್ದಾರೆ. ಜಯಶಾಲಿಯಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಮಾರಂಭದ ಅಸೋಷಿಯೇಶನ್ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವೀರೇಶ್ ಮಹಾಂತಯ್ಯನಮಠ, ರಾಮಣ್ಣ ಹದ್ದಿನ್, ಪ್ರಾಚಾರ್ಯರಾದ ಸಿದ್ಲಿಂಗಪ್ಪ ಕೊಟ್ನೆಕಲ್ಲ್ ಹಾಗೂ ಅಥ್ಲೇಟಿಕ ಅಸೋಷಿಯೇಶನ್ ಎಲ್ಲಾ ನಿರ್ದೆಶಕರು ಸೇರಿದಂತೆ ಇತರರು ಭಾಗವಹಿಸಿದ್ದರು.