ಚಾಲಕನ ನಿರ್ಲಕ್ಷ್ಯ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು

ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡಿದ್ದರಿಂದ  ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.   ಇನ್ನೊರ್ವ ಯುವಕ ಗಂಬೀರ ಗಾಯಗೊಂಡಿದ್ದಾನೆ.

ಹಳೆ ತಹಶೀಲ್ ಕಚೇರಿ ಹತ್ತಿರ ನಡೆದ ಅಪಘಾತ ರಿಯಾಜ್ ೧೯ ಸಾವನ್ನಪ್ಪಿದ ಯುವಕ. ಅಜ್ಮೀರ್ ಗಂಭೀರವಾಗಿ ಗಾಯಗೊಂಡ ಯುವಕನನ್ನು  ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಕೊಪ್ಪಳದ ಕಪಾಲಿ ಓಣಿಯ ನಿವಾಸಿಗಳು. ಅಪಘಾತದಿಂದ ಆಕ್ರೋಶಗೊಂಡ ಸ್ಥಳಿಯರಿಂದ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಬಸ್ ಜಖಂ ಗೊಂಡಿದೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್  ಪೊಲಿಸ್ ಠಾಣೆಗೆ ಶರಣಾಗಿದ್ದಾರೆ.ಬಸ್ ಚಾಲಕ ಸಮಯಪ್ರಜ್ಞೆ ತೋರಿದ್ದರೆ ಯುವಕ ಬದುಕುತ್ತಿದ್ದ ಎಂದು ಹೇಳಲಾಗಿದೆ.