Jds ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಸಂಪೂರ್ಣ ಮನ್ನಾ- ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷ ಎಲ್ಲಿ ದುರ್ಬಲವಾಗಿದೆಯೋ ಅಲ್ಲಿ ಕಾಂಗ್ರೆಸ್ ಪಕ್ಷ ಎಸ್.ಐ.ಟಿ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ, ಜಂತಕಲ್ ಮೈನಿಂಗ್ ಪ್ರಕರಣ ಇದೋಂದು ಬೆನ್ನೂ ಇಲ್ಲ, ಮೂಳೆಯೂ ಇಲ್ಲದಂತಾಗಿರುವ ಪ್ರಕರಣ. ಈ ಪ್ರಕರಣದಲ್ಲಿ ನನ್ನನ್ನು ಏನು ಮಾಡಲು ಆಗುವದಿಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆಯಿಂದ ನಾನು ಬಳಲುತ್ತಿದ್ದೇನೆ, ನಾನು ಇಸ್ರೇಲ್ ನಲ್ಲಿಯೇ ಸಾಯಬೇಕಾಗಿತ್ತು ನಿಮ್ಮೆಲ್ಲರ ಆಶಿವಾರ್ದದಿಂದ ನಾನು ಬದುಕಿ ಬಂದಿದ್ದೇನೆ ಈ ಬಾರಿಯ ಚುನಾವಣೆಯಲ್ಲಿ ಒಂದು ಬಾರಿ ಜೆ.ಡಿ.ಎಸ್ ಗೆ ಅವಕಾಶ ನೀಡಿ. ಹೀಗಂತ ಹೇಳಿದ್ದು ಮಾಜಿ ಮುಖ್ಯ ಮಂತ್ರೀ ಕುಮಾರಸ್ವಾಮಿ…

ಕೊಪ್ಪಳದಲ್ಲಿ ಇಂದು ನಡೆದ ಕುಮಾರ ಪರ್ವ ಸಮಾವೇಶದಲ್ಲಿ ೧೦ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಸಮಾವೇಶಕ್ಕೂ ಮುನ್ನ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಗವಿಶ್ರೀ ಗಳ ಆಶಿವಾರ್ದ ಪಡೆದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಬೆನ್ನೂ ಇಲ್ಲ, ಮೂಳೆಯೂ ಇಲ್ಲ. ಜಂತಕಲ್ ಮೈನಿಂಗ್ ಪ್ರಕರಣ ಇದೊಂದು ನಗೆಪಾಟಿಲಿನ ಪ್ರಕರಣ ಎಂದರು. ಇನ್ನು ಈ ಪ್ರಕರಣದಲ್ಲಿ ನನ್ನನೇನು ಮಾಡೋಕೆ ಆಗೋಲ್ಲ ಎಂದು ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇನ್ಮು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಎಸ್.ಐ,ಟಿ ಮೂಲಕ ಹೆದರಿಸುವ ಹುನ್ನಾರ ನಡೆಸಿದೆ ಎಂದರು. ಇನ್ನು ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಬಳಿಕ ಪಬ್ಲೀಕ್ ಕ್ರೀಡಾಂಗಣದ ಬೃಹತ್ ಸಮಾವೇಶದ ವೇದಿಕೆಗೆ ಆಗಮಿಸಿದ ಕುಮಾರಸ್ವಾಮಿ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿರನಗೌಡ ಪೋಲಿಸ್ ಪಾಟೀಲ್ ಕರಿಯಪ್ಪ ಮೇಟಿ ಸೇರಿದಂತೆ ಹಲವರು ವಿವಿಧ ಪಕ್ಷವನ್ನು ತೋರೆದು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಗೋಂಡರು. ಇನ್ನು ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ ಕುಮಾರಸ್ವಾಮಿ. ಬಿಜೆಪಿಯವರು ಪರಿವರ್ತನಾ ಯಾತ್ರೆಯಲ್ಲಿ ಸಿದ್ದರಾಮಯ್ಯನವರ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡ್ತಾರೆ. ಈಗಾಗಲೇ ಸ್ವತಃ ಬಿ ಎಸ್ ಯಡಿಯೂರಪ್ಪನವರು ಬ್ರಷ್ಟಾಚಾರ ಪ್ರಕರಣದಲ್ಲಿಯೇ ಜೈಲಿಗೆ ಹೋಗಿದ್ದಾರೆ. ಈ ಬಾರಿ ಜನತದಾಳಕ್ಕೆ ಅಧಿಕಾರ ಕೊಟ್ಟರೆ ರೈತರ ಎಲ್ಲಾ ಸಾಲಗಳನ್ನು ನಾನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ. ರೈತರು ಭಯಭೀತರಾಗಬಾರದು, ಎದೆಗುಂದಬಾರದು ನಿಮ್ಮೋಂದಿಗೆ ನಾನಿದ್ದೇನೆ ಎಂದು ರೈತರಿಗೆ ಆತ್ಮಸ್ತೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಅವರ ಮದ್ಯ ಭಾಗ್ಯ ಕೊಟ್ಟಿರುವವರು ಯಾರು. ಇದರ ಬಗ್ಗೆ ಯಾಕೆ ನೀವು ಮಾತನಾಡುವುದಿಲ್ಲ. ಸರ್ಕಾರದಿಂದ ಸಾರಾಯಿ ಮಾರುವುದನ್ನು ನಿಲ್ಲಿಸಬೇಕು. ಮಹಿಳೆಯರ ಒತ್ತಾಯಕ್ಕೆ ಮಣೆದು ಸರಾಯಿ ನಿಷೇಧ ನಾನು ಸಿ.ಎಂ ಇರುವಾಗ ಮಾಡಿದ್ದೇನೆ. ಪುಕ್ಕಟ್ಟೆ ಅಕ್ಕಿ ಕೊಟ್ಟಿದ್ದೇನೆ ಎಂದು ಹೇಳ್ತೀರಾ, ನೀವು ಕೊಡುವ ಮುಂಚೆ ಯಾರೂ ಉಪವಾಸ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ನೀವು ಎಲ್ಲಾ ರಾಜಕಾರಣಿಗಳನ್ನು ನೋಡಿದ್ದೀರಿ, ನಾನು ಅಧಿಕಾರವದಿಯಲ್ಲಿ ಏನೇನೂ ಮಾಡಿದ್ದೇನೆ ಎಂದು ನೋಡಿದ್ದೀರಿ. ನಾನು ಸಮಿಶ್ರ ಸರಕಾರ ಮಾಡಲು ನಿಮ್ಮ ಮುಂದೆ ಈ ಬಾರಿ ಬಂದಿಲ್ಲ. ನನಗೆ ೧೧೩ ಜನ ಶಾಸಕರನ್ನು ಕೊಡಿ. ನಿಮ್ಮನ್ನು ಉಳಿಸುತ್ತೇನೋ ಇಲ್ಲವೋ ನೋಡಿ ಎಂದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ನಾನು ಎಷ್ಟು ದಿನ ಬದುಕುತ್ತೇನೆ ಎನ್ನುವುದು ಗೋತ್ತಿಲ್ಲ. ಇಸ್ರೇಲ್ ನಲ್ಲಿಯೇ ನಾನು ಸಾಯಬೇಕಿತ್ತು, ನಿಮ್ಮ ಆರ್ಶೀರ್ವಾದಿಂದ ಎರಡನೇ ಜನ್ಮ ಎತ್ತಿ ಬಂದಿದ್ದೇನೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೂ ಇಸ್ರೇಲ್ ಪ್ರವಾಸ ಮಾಡಿ ಕೃಷಿ ಅಧ್ಯಯನ ಮಾಡಿದ್ದೇನೆ. ನಾನು ಎಲ್ಲರನ್ನೂ ಕುರಿಸಿಕೊಂಡು ಟಿಕೆಟ್ ನೀಡುತ್ತೇನೆ. ಯಾವುದೇ ಅಸಮಧಾನ ಆಗದಂತೆ ನೋಡಿಕೊಳ್ಳುತ್ತೇನೆ. ನೀವು ನನ್ನನ್ನು ಉಳಿಸಿದರೆ ನಾನು ನಿಮ್ಮನ್ನು ಉಳಿಸುತ್ತೇನೆ ಎಂದು ಮನವಿ ಮಾಡಿದರು. ಇನ್ನು ನಾನು ಕರ್ನಾಟಕಕ್ಕೆ ರಾಜಕೀಯ ವ್ಯಾಪಾರ ಮಾಡಲಿಕ್ಕೆ ಬಂದಿರುವುದು ಎಂದು ಅಮಿತ್ ಶಾ ಹೇಳಿಕೆ ನೀಡುತ್ತಾರೆ. ಹೀಗೆ ಮಾತನಾಡುವವರಿಗೆ ಓಟ್ ಹಾಕ್ತೀರಾ ವಿಚಾರ ಮಾಡಿ. ನಿಮ್ಮ ಕೈ ಮುಗಿದು ಕೇಳ್ತೀನಿ ದಯವಿಟ್ಟು ಇದೊಂದು ಬಾರಿ ನನಗೆ ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು. ಇನ್ನು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ್ ಹೋರಟ್ಟಿ ಸೇರಿದಂತೆ ಪಕ್ಷದ ವಿವಿಧ ಗಣ್ಯರು ಉಪಸ್ತಿತರಿದ್ದರು…

Please follow and like us:
error