You are here
Home > Koppal News > ಅಗ್ನಿ-IV ಕ್ಷಿಪಣಿಯ ಯಶಸ್ವೀ ಪರೀಕ್ಷೆ

ಅಗ್ನಿ-IV ಕ್ಷಿಪಣಿಯ ಯಶಸ್ವೀ ಪರೀಕ್ಷೆ

ಬಾಲಸೂರು (ಒಡಿಶಾ) ನ.15: ಭಾರತವಿಂದು ಒಡಿಶಾ ಸಾಗರಾಂತರದ ದ್ವೀಪವೊಂದರಲ್ಲಿ 3 ಸಾವಿರ ಕಿ.ಮೀ. ವ್ಯಾಪ್ತಿಯ, ಪರಮಾಣು ಶಕ್ತ ‘ಅಗ್ನಿ’ ಪ್ರಕ್ಷೇಪಕ ಕ್ಷಿಪಣಿಯ ಹೊಸ ಮಾದರಿಯ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ 
ನಡೆಸಿದೆ. ‘ಅಗ್ನಿ’- IV ಎಂದು ಹೆಸರಿಸಲಾಗಿರುವ ಈ ನೆಲದಿಂದ- ನೆಲಕ್ಕೆ ಹಾರುವ ಮಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಸಮಗ್ರ ಪರೀಕ್ಷಾ ವಲಯದಲ್ಲಿ ಸಂಚಾರಿ ಉಡಾವಕವೊಂದರಿಂದ ಹಾರ ಬಿಡಲಾಗಿದ್ದು, ಪರೀಕ್ಷೆ ‘ಸಂಪೂರ್ಣ ಯಶಸ್ವಿ’ಯಾಗಿದೆಯೆಂದು ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಒ) ವಕ್ತಾರ ರವಿಕುಮಾರ್ ಗುಪ್ತಾ ತಿಳಿಸಿದರು.
ಹೊಸ ತಲೆಮಾರಿನ ಈ ಕ್ಷಿಪಣಿಯು ಯೋಜನೆಯ ಎಲ್ಲ ಅಂಶಗಳನ್ನು ಪೂರೈಸಿದ್ದು, ಯಶಸ್ವಿಯಾಗಿ 3 ಸಾವಿರ ಕಿ.ಮೀ. ದೂರ ಕ್ರಮಿಸಿತೆಂದು ಅವರು ಹೇಳಿದರು. ಇಂದು ಮುಂಜಾನೆ 9ರ ವೇಳೆ ವೀಲರ್ ದ್ವೀಪದಿಂದ ಪ್ರಯೋಗಿಸಲಾದ ಅಗ್ನಿ-ಐ್ಖರ ವ್ಯಾಪ್ತಿಯನ್ನು 3, 500 ಕಿ.ಮೀ. ವರೆಗೆ ವೃದ್ಧಿಸಬಹುದೆಂದು ಗುಪ್ತಾ ತಿಳಿಸಿದರು. ಈ ಮೊದಲು ‘ಅಗ್ನಿ-ಐಐ ಪ್ರೈಮ್’ ಎಂದು ಕರೆಯಲಾಗಿದ್ದ ಈ ಕ್ಷಿಪಣಿಯು ಸುಧಾರಿತ ಸಾಧನೆಗಾಗಿ ಹೊಸ ತಂತ್ರಜ್ಞಾನ ಹಾಗೂ ಆಧುನಿಕ ವ್ಯವಸ್ಥೆಯನ್ನು ಹೊಂದಿದೆಯೆಂದು ಅವರು ಹೇಳಿದರು.
ಅಗ್ನಿ-IV ಘನ ಇಂಧನ ಚಾಲಿತ ಎರಡು ಹಂತಗಳ ಆಯುಧ ವ್ಯವಸ್ಥೆಯಾಗಿದೆ. ಅದು 20 ಮೀ. ಉದ್ದವಾಗಿದ್ದು, 17 ಟನ್ ಭಾರವಿದೆ. ಕ್ಷಿಪಣಿಯು ಒಂದು ಟನ್ ಸಿಡಿತಲೆ ಒಯ್ಯುವ ಸಾಮರ್ಥ್ಯ ಹೊಂದಿದೆ.

Leave a Reply

Top