ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ Internal quality assurence celಕಾರ್ಯಚಟುವಟಿಕೆಗಳು.

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನ ನಿತ್ಯದ ಪಾಠ ಪ್ರವಚನಗಳ ನಡುವೆಯೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಕೌಶಲ್ಯ ಅಭಿವೃದ್ಧಿಯ ಜೊತೆಗೆ ವ್ಯಕ್ತಿತ್ವ ವಿಕಾಸವನ್ನುಂಟು ಮಾಡುವ ಚಟುವಟಿಕೆಗಳು ಕಾಲೇಜು ಶಿಕ್ಷಣ ಇಲಾಖೆಯ ಆದೇಶದನ್ವಯ ನಿರಂತರವಾಗಿ ಜರುಗುತ್ತಲಿವೆ. ಆಂತರೀಕ ಗುಣಮಟ್ಟ ಭರವಸೆ ಕೋಶ (ಐ.ಕ್ಯೂ.ಎ.ಸಿ) ಎಂಬ ಹೆಸರಿನಲ್ಲಿ  ಬಿ.ಎ, ಬಿ.ಕಾಂ, ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳಿಗಾಗಿ  ವಿಷಯವಾರು ಮಹತ್ವದ ಉಪನ್ಯಾಸಗಳು ಹಾಗು ಕ್ಷೇತ್ರ ಕಾರ್ಯ ( ಫೀಲ್ಡ ವರ್ಕ) ದಂತಹ  ಚಟುವಟಿಕೆಗಳು ನಡೆಯುತ್ತಲಿವೆ. ಪ್ರಾಚಾರ್ಯ ತಿಮ್ಮರೆಡ್ಡಿ ಮೇಟಿಯವರು  ಇಲಾಖೆಯ  ಈ ಎಲ್ಲ ಯೋಜನೆಗಳನ್ನು  ಚಾಚು- ತಪ್ಪದೇ ಪಾಲಿಸಿ  ವಿದ್ಯಾರ್ಥಿಗಳ  ಶ್ರೇಯೋಭಿವೃದ್ಧಿಗಾಗಿ  ಶ್ರಮಿಸುತ್ತಿದ್ದಾರೆ. 
ಈವರೆಗೂ  ಕನ್ನಡ ವಿಭಾಗದಿಂದ ವೈಚಾರಿಕ ಪ್ರಬಂಧಗಳ ಮಹತ್ವ ಉಪನ್ಯಾಸ – ಸಾಹಿತಿ ಎಚ್.ಎಸ್.ಪಾಟೀಲ,  ಅಂತರ್ಜಾಲದಲ್ಲಿ ಕನ್ನಡ ಬಳಕೆ – ಸಿರಾಜ ಬಿಸರಳ್ಳಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಗಳ ಕುರಿತು ಕ್ಷೇತ್ರಕಾರ್ಯ,  ಇಂಗ್ಲೀಷ್ ವಿಭಾಗದಿಂದ ಇಂಗ್ಲೀಷ್ ಸಾಹಿತ್ಯ ಚರಿತ್ರೆಯ ಉಪನ್ಯಾಸ – ಮಹೇಶಬಳ್ಳಾರಿ,  ಇತಿಹಾಸ ವಿಭಾಗದಿಂದ  ಪಾಲ್ಕಿ ಗುಂಡಿನಲ್ಲಿರುವ   ಆಶೋಕ ಶಿಲಾಶಾಸನ ವೀಕ್ಷಣೆ,  ರಾಜ್ಯ ಶಾಸ್ತ್ರ ವಿಭಾಗದಿಂದ  ಭಾರತದ ಸಂವಿಧಾನ ಕುರಿತು ಉಪನ್ಯಾಸ – ಉದಯಸಿಂಗ್,  ಸಮಾಜ ಶಾಸ್ತ್ರ ವಿಭಾಗದಿಂದ ಹೆಚ್.ಐ.ವಿ ತಡೆಗಟ್ಟುವಿಕೆಯ ಮಾಹಿತಿಗಾಗಿ ಎ.ಐ.ಆರ್.ಟಿ.ಸಿ ಸೆಲ್‌ಗೆ ಭೇಟಿ , ಶಿಕ್ಷಣ ಶಾಸ್ತ್ರ ವಿಭಾಗದಿಂದ ವ್ಯಕ್ತಿತ್ವ ವಿಕಾಸ ಉಪನ್ಯಾಸ -ಎಸ್.ಎನ್.ಗೌಡರ,  ಕ್ಷೀರ ಭಾಗ್ಯ ಯೋಜನೆ ಕುರಿತು ಮಾಹಿತಿಗಾಗಿ ಸರ್ದಾರಗಲ್ಲಿ ಸ.ಪ್ರಾ.ಶಾಲೆಗೆ ಭೇಟಿ, ಸ್ಥಳೀಯ ರಾಮಕೃಷ್ಣಾಶ್ರಮಕ್ಕೆ ಭೇಟಿ ನೀಡಿ ಚೈತನ್ಯಾನಂದ ಸ್ವಾಮಿಗಳಿಂದ ವೇದ ಉಪನಿಷತ್ತುಗಳ  ಮಾಹಿತಿ ಸಂಗ್ರಹಣೆ,  ಅರ್ಥಶಾಸ್ತ್ರ ವಿಭಾಗದಿಂದ ಹಣದ ಕಾರ್ಯ ಉಪನ್ಯಾಸ – ಯಮನೂರಪ್ಪ,  ಕನಿಷ್ಟ ಪ್ರಯತ್ನ ಸಿದ್ಧಾಂತ ಉಪನ್ಯಾಸ – ಬಾಸ್ಕರ್ ಹುದ್ದಾರ, ಮಾನವ ಸಂಪನ್ನೂಲ ಅಭಿವೃದ್ಧಿ ಉಪನ್ಯಾಸ – ಶರಣಬಸಪ್ಪ ಬಿಳಿಯಲಿ, ಪರೀಕ್ಷಾಸಿದ್ಧತೆ ಹಾಗೂ ಸ್ಮರಣಾ ಶಕ್ತಿಯ ಉಪನ್ಯಾಸ- ವಿ.ಬಸವರಾಜ,  ರುಪಾಯಿಯ ಬಿಕ್ಷಟ್ಟು ಉಪನ್ಯಾಸ -ಎಂ.ಬಾಚಲಾಪುರ,  ಎ.ಪಿ.ಎಂ.ಸಿ  ಕಾರ್ಯಗಳ ಕುರಿತು  ಕ್ಷೇತ್ರಕಾರ್ಯ, ಗಣಿತ ವಿಭಾಗದಿಂದ ಗಣ ಸಿದ್ಧಾಂತ ಉಪನ್ಯಾಸ – ಪ್ರತಾಪ್ ಬಾಬುರಾವ್,  ರಸಾಯನ ಶಾಸ್ತ್ರ ವಿಭಾಗದಿಂದ ಮನುಕುಲದ ಸೇವೆಯಲ್ಲಿ ರಸಾಯನ ಶಾಸ್ತ್ರ ಉಪನ್ಯಾಸ – ಎಂ.ದಾದ್ಮಿ,  ಭೌತ ಶಾಸ್ತ್ರ ವಿಭಾಗದಿಂದ ಫ್ರೇಮ್ಸ ಆಫ್ ರೆಫರನ್ಸ  ಉಪನ್ಯಾಸ – ಬಿ.ಡಿ.ಕೇಶವನ್, ವಾಣಿಜ್ಯ ವಿಭಾಗದಿಂದ  ಸಂಡೂರ ಮಹಾವಿದ್ಯಾಲಯದಲ್ಲಿ ನಡೆದಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರದಲ್ಲಿ ಭಾಗಿ, ಪದವಿನಂತರ ಮುಂದೇನು? ಉಪನ್ಯಾಸ- ಅರುಣ ಕರಮರಕರ, ಉದ್ದಿಮೆದಾರರಾಗುವ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ  ಸ್ಥಳೀಯ ಕೈಗಾರಿಕಾ ಇಲಾಖೆಗೆ ಭೇಟಿ , ಕೃಷಿ ಉಪಕರಣಗಳ ಮಾಹಿತಿಗಾಗಿ ಸ್ಥಳೀಯ ಮಹೇಂದ್ರ ಎಂಟರ್ ಪ್ರೈಜಸ್‌ಗೆ ಭೇಟಿ . ಹೀಗೆ ಹತ್ತು ಹಲವು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳು ಹಾಗು ಕ್ಷೇತ್ರಕಾರ್ಯದಂತಹ ಚಟುವಟಿಕೆಗಳು  ಪ್ರಾಚರ್ಯ ತಿಮ್ಮರೆಡ್ಡಿ ಮೇಟಿ ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಭಂದಿಗಳ ನೆರವಿನೊಂದಿಗೆ ಜರುಗಿ ವಿದ್ಯಾರ್ಥಿಗಳ ಭೌದ್ಧಿಕ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿವೆ. ಈ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗು ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಅಧಿಕಾರಿಗಳಿಗೆ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಅಭಿನಂಧನೆ ಸಲ್ಲಿಸಿದ್ದಾರೆ.
Please follow and like us:
error