ICC ತೀರ್ಮಾನ ವಿರೋಧಿಸಿ ರೈತರ ಪ್ರತಿಭಟನೆ

ರೈತರನ್ನು ಕಡೆಗಣನೆ ಹಿನ್ನೆಲೆ ಆಕ್ರೋಶ

ಗಂಗಾವತಿ : ನಿನ್ನೆ ನಡೆದ ತುಂಗಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯು  ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊಪ್ಪಳ ಮತ್ತು ರಾಯಚೂರು ರೈತರಿಗೆ ಎರಡನೇ ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಈ ಹಿಂದಿನ ಮಳೆ ವರ್ಷದಲ್ಲಿ ತುಂಗಭದ್ರಾ ಡ್ಯಾಂಗೆ ಕೇವಲ 130 ಟಿಎಂಸಿ ನೀರು ಬಳಕೆಗೆ ಲಭ್ಯವಾಗಿತ್ತು. ಆದರೆ, ಈ ವರ್ಷ ಬರೋಬ್ಬರಿ 171 ಟಿಎಂಸಿ ನೀರು ಬಳಕೆಗೆ ಲಭ್ಯವಾಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ಬಾರಿ 41 ಟಿಎಂಸಿಗೂ ಹೆಚ್ಚು ನೀರು ಬಳಕೆಗೆ ಸಿಕ್ಕಿರುವದರಿಂದ ಬರೋಬ್ಬರಿ 5 ವರ್ಷದ ನಂತರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೆ ಬೆಳೆಯನ್ನು ನಿರಾತಂಕವಾಗಿ 
ಬೆಳೆಯುವ ಕನಸು ಕಂಡಿದ್ದರು. ಆದ್ರೆ, ನಿನ್ನೆ ನಡೆದ‌ ಐಸಿಸಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾಕಷ್ಟು ನೀರಿದ್ದರೂ ಕೂಡ ಮಾರ್ಚ್ 31 ರ ವರಗೆ ಮಾತ್ರ ಕಾಲುವೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುವ ಘೋಷಣೆ ಮಾಡಿದ್ದಾರೆ. ಇಷಕ್ಕೆ ಸುಮ್ಮನಾಗದ ನಮ್ಮ ಜಾಣ‌ ನಾಯಕರು ಏಪ್ರೀಲ್ ವರೆಗೂ ನೀರು ಕೊಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿ ರೈತರಲ್ಲಿ ಗೊಂದಲ‌ ಸೃಷ್ಠಿ ಮಾಡಿದ್ದಾರೆ. ಡ್ಯಾಂ ನಲ್ಲಿ ಸಾಕಷ್ಟು ನೀರಿದ್ದರೂ ಕೂಡ ರೈತರ ಬೆಳೆಗೆ ನೀರು ಕೊಡುವುದಕ್ಕೆ 8 ಗಂಟೆ ಸಭೆ ಮಾಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರ್ಖಾನೆ ಹಿತ ಕಾಯುವ ಬಗ್ಗೆ ಚರ್ಚೆ ಮಾಡಿದ್ದೇ ಹೆಚ್ಚು ಎಂಬುದು ನಮ್ಮ ಸಂಘಟನೆಯ ಆರೋಪ. ನೀರಿದ್ದರು ಕೊಡುವುದಕ್ಕೆ ಇಷ್ಟೊಂದು ಯೋಚನೆ ಮಾಡುತ್ತಾರೆ ಎನ್ನುವುದಾದರೆ, ಕಾರ್ಖಾನೆಗಳಿಗೆ ಸಾಕು ಎಂದಾಗ ಮಾತ್ರ ರೈತರಿಗೆ ನೀರು ಕೊಡುವ ಹುನ್ನಾರ ಇದರಲ್ಲಿ ಹಡಗಿದೆ ಎಂದು ಸಂಘಟನೆ ನೇರವಾಗಿ ಆರೋಪಿಸುತ್ತದೆ. ಮಾರ್ಚ್ ‌31ರ ವರೆಗೆ ನೀರು ಕೊಟ್ಟರೆ ಅಚ್ಚುಕಟ್ಟು ಪ್ರದೇಶದ ಕೆಳ ಭಾಗದ ರೈತರು ಎರಡನೇ ಬೆಳೆಯುವುದು ಅಸಾಧ್ಯವಾದ ಮಾತು. ಇದರಿಂದ ಕೂಡಲೇ ಮತ್ತೊಂದು ಸಭೆ ಕರೆದು ಸಂಪ್ರದಾಯದಂತೆ ಮೇ 30 ರ ವರಗೆ ಎಡದಂಡೆ ಕಾಲುವೆಗೆ ಪೂರ್ಣ ಪ್ರಮಾಣದಲ್ಲಿ ಎಂದರೆ‌ 3800 ಕ್ಯೂಸೆಕ್ ನೀರು ಹರಿಸಬೇಕು ಎಂದು  ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಕೇಸರಹಟ್ಟಿ ಶರಣಗೌಡ 

ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಬದಲ್ಲಿ ಶರಣಗೌಡ ಯರಡೊಣ, ಗುರಪಾದಗೌಡ ಕಾರ್ಯದರ್ಶಿ ಗುಡದನಗೌಡ ಕಲ್ಲಗುಡಿ  ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ, ಕೊಪ್ಪಳ ಜಿಲ್ಲಾ ಘಟಕದವರು ಉಪಸ್ಥಿತರಿದ್ದರು

Please follow and like us:
error