ಗಂಗಾವತಿಯಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿ

ಗಂಗಾವತಿಯಲ್ಲಿ ಇಂದು ನಡೆದ ಶ್ರೀಮಹರ್ಷಿ ವಾಲ್ಮಿಕಿ ಜಯಂತಿಯ ಅಂಗವಾಗಿ ವೇದಿಕೆ ಕಾರ್ಯಕ್ರಮದ ನಂತರ ಮೆರವಣಿಗೆಯನ್ನು ಶ್ರೀಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವಿದ್ಯುಕ್ತವಾಗಿ ಶಾಸಕ ಇಕ್ಬಾಲ್ ಅನ್ಸಾರಿ ಚಾಲನೆ ನೀಡಿದರು.

ಗಂಗಾವತಿ ನಾಯಕ ಸಮಾಜ ಭಾಂದವರ ಹಲವಾರು ಬೇಡಿಕೆಗಳನ್ನು ಸ್ವೀಕರಿಸಿ , ಸಂವಿಧಾನದ ಚೌಕಟ್ಟಿನಲ್ಲಿ ಸಮಾಜದವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀಮಹರ್ಷಿ ವಾಲ್ಮಿಕಿ ಭವನ ನಿರ್ಮಾಣಕ್ಕೆ ಈ ಹಿಂದೆ ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಲಾಗಿತ್ತು ಈಗ ಕೆಲ ಹಂತದ ಕಾಮಗಾರಿಯೂ ಪೂರ್ಣಗೊಂಡಿದ್ದು ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಿ ಭವನವನ್ನು ಸಮಾಜದ ಜನರಿಗೆ ಸಮರ್ಪಿಸುವ ಸಲುವಾಗಿ ಸಂಭಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಭವನ ನಿರ್ಮಾಣವನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.