ಮಾಧ್ಯಮಗಳ ಸಣ್ಣತನ : ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Gangavti : ಸಾಮಾಜಿಕ ಮಾಧ್ಯಮಗಳು ಬಹಳ ಪರಿಣಾಮಾರಿಯಾಗಿವೆ‌. ೫೦ ವರ್ಷಗಳ ಹಿಂದೆ ಇರುವ ಮಾಧ್ಯಮಕ್ಕೆ ಸದ್ಯದ ಮಾಧ್ಯಮಕ್ಕೆ ಬಹಳಷ್ಟ ವ್ಯತ್ಯಾಸವಿದೆ. ಮಾಧ್ಯಮವೂ ಸಮಾಜದಲ್ಲಿರುವ ದೊಡ್ಡ ಜವಾಬ್ದಾರಿ ಇರುವ ಅಂಗ. ಅಂದಿನ ಮಾಧ್ಯಮದ ಉದ್ದೇಶ ಬೇರೆ ಇತ್ತು. ಇಂದಿನ ಮಾಧ್ಯಮಗಳ ಉದ್ದೇಶ ಬೇರೆ ಇದೆ.ಮಾಧ್ಯಮದವರು ಇಂದಿನ ಮಾಧ್ಯಮದ ನಿಜವಾದ ಜವಾಬ್ದಾರಿ ಹಾಗೂ ಉದ್ದೇಶವನ್ನು ಅರಿತು ಕೆಲಸ ಮಾಡಿದರೆ ಸಮಾಜಕ್ಕೆ ಒಳಿತು.ಸಮಾಜಕ್ಕೆ ಒಳಿತು ಆಗುವಂತ ವಿಚಾರಗಳಿಗೆ ಮಾಧ್ಯಮಗಳು ಒತ್ತು ಕೊಡಬೇಕು. ಮಾಧ್ಯಮಗಳಲ್ಲಿ ಸಾಕಷ್ಟು ಹಿರಿಯರು ಕಿರಿಯರು ಪರಿಚಯವಿದ್ದಾರೆ. ಯಾರನ್ನು ನಾನು ದೂಷಿಸುವುದಿಲ್ಲ ವಿಚಾರಗಳು ಆಬ್ಜೆಕ್ಟ್ ವಾಗಿ ಇರಬೇಕು. ಇನ್ವೆಸ್ಟಿಗೇಷನ್ ರೂಪದಲ್ಲಿ ಇರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ರೀತಿಯಲ್ಲಿ ಇರಬೇಕು.ಜನಪರ ಕಾಳಜಿಯಿಂದ ಮಾಧ್ಯಮಗಳ ಕೆಲಸ ಮಾಡಬೇಕು.

ಗಂಡ ಹೆಂಡತಿಯ ಜಗಳದ ಬಗ್ಗೆ ತೋರಿಸದರೆ ಏನ್ ಪ್ರಯೋಜನ? ನಾನು ಧರ್ಮಸ್ಥಳಕ್ಕೆ ಕೋಳಿ‌ ಮೀನು ತಿಂದ್ದು ಹೋಗಿದ್ದು ನಿಜ! ಆದ್ರೆ ದೇವಸ್ಥಾನಕ್ಕೆ ಹೋಗಲಿಲ್ಲ ಹೊರಗಡೆಯಿಂದ ನಮಸ್ಕಾರ ಮಾಡಿಕೊಂಡು ಬಂದಿದ್ದೆ. ಆದ್ರೂ ಅದನ್ನು ಪದೇ ಪದೇ ತೋರಿಸಲಾಯಿತು.ಚಾಮುಂಡಿ ಬೆಟ್ಟಕ್ಕೆ ಬೂಟ್ ಹಾಕಿಕೊಂಡಿಲ್ಲ ಅಂದ್ರು ತೋರಿಸುದ್ರು. ಹಸಿವದ್ರೆ ಮಾಂಸ ತಿನ್ನೋದು ತಪ್ಪಾ? ರಾತ್ರಿ ತಿಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋದ್ರೆ ನಡೆಯುತ್ತಾ ? ಬೇಡರ ಕಣ್ಣಪ್ಪ ಮಾಂಸ ನೇವೈದ್ಯ ಮಾಡಿದ ದೇವರು ಪ್ರತ್ಯಕ್ಷವಾಗಲಿಲ್ವಾ ? ಇದೆಲ್ಲಾ ನಾವೇ ಮಾಡಿಕೊಂಡಿದ್ದು. ಆದ್ರೆ ನಾನು ಮಾಂಸ ತಿಂದು ಹೋಗಿದ್ದನ್ನ ಮಾಧ್ಯಮಗಳು ತೋರಿಸಿದ್ದೇ ತೋರಿಸಿದ್ದು. ಆದ್ರೂ ನಾನು ಐದು ವರ್ಷ ಆಡಳಿತವನ್ನು ನಡೆಸಿದೆ. ನಾನು ಯಾವತ್ತೂ ಹೀಗೇಕೆ ಮಾಡಿದ್ರಿ ಅಂತಾ ಪ್ರಶ್ನೆ ಮಾಡಲಿಲ್ಲ. ಯಾಕೆಂದರೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ನಂಬಿಕೆಗಳು ಇರಬೇಕು ಅದು ಮೌಡ್ಯಗಳಿರಬಾರದು. ಆತ್ಮಸಾಕ್ಷಿಗೆ ನಡೆದುಕೊಳ್ಳುವುದು ನಿಜವಾಗಿ ದೇವರಿಗೆ ಸಲ್ಲಿಸುವ ಗೌರವ..ಮನುಷ್ಯತ್ವದಲ್ಲಿ ನಂಬಿಕೆ ಇರಬೇಕು..ಮನುಷ್ಯತ್ವದಿಂದ ನಡೆದುಕೊಳ್ಳುವುದು ನಿಜವಾದ ಧರ್ಮ ಅಂತ ಮಾಜಿ ಸಿಎಂ ಸಿದ್ದಾರಮಯ್ಯ ಮಾಧ್ಯಮ‌ ಪಾಠ ಮಾಡಿದರು. ವೇದಿಕೆ ಮೇಲೆ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗರ, ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ, ಶಿವರಾಕ ತಂಗಡಗಿ , ಮಾಜಿ ಸಂಸದ ಶಿವರಾಮೇ ಗೌಡ, ಕೆ. ವಿರುಪಾಕ್ಷಪ್ಪ‌ ಇದ್ದರು.

Please follow and like us:
error