ECO CLUB ಕಾರ್ಯಕ್ರಮ

ದಿ ೧೬.ರಂದು ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮದಲ್ಲಿ ECO
CLUB ಕಾರ್ಯಕ್ರಮ ಆಯೋಜಿಸಲಾಗಿತ್ತು ಗ್ರಾಮದ ಹಿರಿಯರಾದ ವೆಂಕೋಬರಾವ್ ಮಾಲಿಪಾಟೀಲ ಇವರ ತೋಟಕ್ಕೆ  ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊರಡಲಾಯಿತು.ಸದರಿ ಕಾರ್ಯಕ್ರಮದಲ್ಲಿ ECO
CLUB  ಕುರಿತು ಕೃಷಿ ತಜ್ಞರೊಂದಿಗೆ ಶಾಲಾ ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು .
         ವಸಾಯ/ ಸಾವಯುವ ಕೃಷಿ ಬಗ್ಗೆ ಉತ್ತಮ ರೀತಿಯ ಸಂವಾದ ನಡೆಸಲಾಯಿತು. ಕಾರ್ಯಕ್ರಮವನ್ನು ಸತೀಶ ಸ.ಶಿ ನಿರೂಪಿಸಿದರು, ಸಂಗಪ್ಪ ಚಕ್ರಸಾಲಿ ಸ.ಶಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮು.ಶಿ ಶ್ರೀಮತಿ ರತ್ನಮ್ಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀಮತಿ ಅಕ್ಕಮಹಾದೇವಿ ಸ್ವಾಗತಿಸಿದರು. ಶ್ರೀಮತಿ ರೇಖಾ ಸ.ಶಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು. ಶಾಲಾ ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.  
Please follow and like us:
error