You are here
Home > Koppal News > DCC ನೂತನ ಅಧ್ಯಕ್ಷ ಶಿವರಾಜ ತಂಗಡಗಿಯವರಿಗೆ ಸನ್ಮಾನ

DCC ನೂತನ ಅಧ್ಯಕ್ಷ ಶಿವರಾಜ ತಂಗಡಗಿಯವರಿಗೆ ಸನ್ಮಾನ

koppal News :  ಮುನಿರಾಬಾದ ಇಂದಿರಾ ಅತಿಥಿ ಭವನದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾದ  ಶಿವರಾಜ ತಂಗಡಗಿ ಅವರು ಜಿಲ್ಲೆಯ ಎಲ್ಲ ಕಾಂಗ್ರೇಸ್ ಘಟಕದ ಅಧ್ಯಕ್ಷರುಗಳ ಸಭೆಯನ್ನು ಕರೆದಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಘಟಕದ ವತಿಯಿಂದ ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾದ   ಶಿವರಾಜ ತಂಗಡಗಿ ಅವರನ್ನು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ   ವೆಂಕಟೇಶ ಎಂ.ಆರ್. ಇವರು ಸನ್ಮಾನಿಸಿದರು. ಜಿ.ಪಂ.ಅಧ್ಯಕ್ಷ   ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾಟನ್ ಪಾಷ, ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ, ಉಪಾಧ್ಯಕ್ಷ ಶಿವಪ್ರಸಾದ ಚಲಸಾನಿ, ವೀರಭಧ್ರಯ್ಯ ಭೂಸನೂರಮಠ, ಅಶೋಕ ಗೋರಂಟ್ಲಿ, ಹುಲಗಪ್ಪ ಬಂಡಿವಡ್ಡರ್, ಬುಡ್ನೇಸಾಬ ಕಲಾದಗಿ ಉಪಸ್ಥಿತರಿದ್ದರು.

Top